ಮಾನವ ಅಂಗಾಂಗ ಕಸಿ ಕಾಯಿದೆ


17.ಮನಿಗಳು

(1) ಯಾವುದೇ ವ್ಯಕ್ತಿಯು ಪ್ರಮಾಣೀಕರಣ ಪ್ರಾಧಿಕಾರವು ಸೆಕ್ಷನ್ 9 ರ ಸಬ್ ಸೆಕ್ಷನ್(6)ರಡಿಯಲ್ಲಿ ಅನುಮೋದನೆಯನ್ನು ತಿರಸ್ಕರಿಸಿದ ಆದೇಶದಿಂದ ಅನ್ಯಾಯಕ್ಕೊಳಗಾಗಿದ್ದಲ್ಲಿ ಅಥವಾ ಸೂಕ್ತ ಪ್ರಾಧಿಕಾರವು ಸೆಕ್ಷನ್ 15 ರ ಸಬ್-ಸೆಕ್ಷನ್(2)ಡರಿಯಲ್ಲಿ ನೋಂದಣಿ ಅರ್ಜಿಯನ್ನು ತಿರಸ್ಕರಿಸಿ ನೋಂದಣಿಯನ್ನು ರದ್ದುಪಡಿಸುವುದರಿಂದಾಗಿ, ಯಾವುದೇ ಆಸ್ಪತ್ರೆಗೆ ಆದೇಶದಿಂದ ಅನ್ಯಾವಾಗಿದ್ದಲ್ಲಿ ಅಂತಹ ವ್ಯಕ್ತಿ ಅಥವಾ ಆಸ್ಪತ್ರೆಗಳು ಆದೇಶವನ್ನು ಪಡೆದ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ ಇಂತಹ ಆದೇಶದ ವಿರುದ್ಧ ಈ ಕೆಳಗೆ ಸೂಚಿಸಿದವರಿಗೆ ದೂರು ನೀಡಬಹುದು: (i) ಪ್ರಮಾಣೀಕರಣ ಪ್ರಾಧಿಕಾರದ ಸಮಿತಿಯ ನ್ನು ಕೇಂದ್ರ ಸರ್ಕಾರ ರಚನೆ ಮಾಡಿರುವುದರಿಂದ ಸೆಕ್ಷನ್ ರ ಸಬ್-ಸೆಕ್ಷನ್(4)ರಡಿಯಲ್ಲಿ ಆದೇಶದ ವಿರುದ್ಧ ಸೆಕ್ಷನ್ 13 ಸಬ್ ಸೆಕ್ಷನ್ (1) ರಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಬಹುದು; ಅಥವಾ (ii) ರಾಜ್ಯ ಸರ್ಕಾರವು , ಸೆಕ್ಷನ್ 9 ಸಬ್ ಸೆಕ್ಷನ್(4) ಕ್ಲಾಸ್(ಎ) ಅಡಿಯಲ್ಲಿ ಪ್ರಮಾಣೀಕರಣ ಸಮಿತಿಯನ್ನು ರಚಿಸಿರುವುದರಿಂದ ಸೂಕ್ತ ಪ್ರಾಧಿಕಾರಕ್ಕೆ ಪ್ರಮಾಣೀಕರಣ ಸಮಿತಿಯ ವಿರುದ್ಧ ಸೆಕ್ಷನ್ 13 ಸಬ್ ಸೆಕ್ಷನ್(2)ರಡಿಯಲ್ಲಿ ನೇಮಿಸಲ್ಪಟ್ಟ ಸೂಕ್ತ ಪ್ರಾಧಿಕಾರಕ್ಕೆ ದೂರು ನೀಡಬಹುದಾಗಿದೆ

ಅಧ್ಯಾಯ VI ಅಪರಾಧಗಳು ಮತ್ತು ದಂಡಗಳು
18. ಅಧಿಕಾರವಿಲ್ಲದೇ ಮಾನವ ಅಂಗಾಂಗಗಳನ್ನು ತೆಗೆಯುವುದಕ್ಕೆ ಶಿಕ್ಷೆ

(1) ಯಾವುದೇ ಸೇವೆಯನ್ನು ನೀಡುವಂತಹ ಯಾವುದೇ ವ್ಯಕ್ತಿ ಅಥವಾ ಯಾವುದೇ ಆಸ್ಪತ್ರೆ, ಅಥವಾ ಯಾರಿಗೆ ಯಾವ ಉದ್ದೇಶಕ್ಕೆ ಕಸಿಯನ್ನು ಮಾಡಲಾಗಿದೆ, ಅದರೊಂದಿಗೆ ಸಮ್ಮಿಳಿತವಾಗಿರುವುದು, ಅಥವಾ ಯಾವುದೇ ರೀತಿಯಲ್ಲಿ ಸಹಾಯ ಮಾಡಿರುವುದು ಯಾವುದೇ ಮಾನವ ಅಂಗಾಂಗಗಳನ್ನು ಪ್ರಾಧಿಕಾರದ ಅನುಮತಿಯಿಲ್ಲದೆ ತೆಗೆಯುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಅದು ಕೆಲವು ಅವಧಿಗೆ ಆಗಿರಬಹುದು ಅದು ದಂಡ ಸಹಿತ ಐದು ವರ್ಷಗಳು ಅದು ಹತ್ತು ಸಾವಿರ ರೂಗಳವರೆಗೆ ಆಗಬಹುದಾಗಿದೆ. (2) ಸಬ್ ಸೆಕ್ಷನ್(1) ರಡಿಯಲ್ಲಿ ಅಪರಾಧಿಯಾಗಿರುವ ವ್ಯಕ್ತಿಯು ಒಬ್ಬ ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಷನರ್/ ವೈದ್ಯರಾಗಿದ್ದರೆ, ಅಂತಹವರ ಹೆಸರನ್ನು ಸಂಬಂಧಪಟ್ಟ ರಾಜ್ಯದ ವೈದ್ಯಕೀಯ ಕೌನ್ಷಿಲ್ ಗೆ ಅಗತ್ಯ ಕ್ರಮಕ್ಕಾಗಿ ಸೂಕ್ತ ಪ್ರಾಧಿಕಾರ ತಿಳಿಸಬೇಕು ಇದರಲ್ಲಿ ಮೊದಲನೇ ವರ್ಷ ಕೌನ್ಸಿಲ್ ನಿಂದ ಹೆಸರನ್ನು ಎರಡು ವರ್ಷಗಳವರೆಗೆ ತೆಗೆದುಹಾಕುವು ಸೇರಿರುತ್ತದೆ ಮತ್ತ ಮುಂದುವರಿದ ಅಪರಾಧಗಳಿಗೆ ಶಾಶ್ವತವಾಗಿ ತೆಗೆದು ಹಾಕುವುದನ್ನು ಒಳಗೊಂಡಿರುತ್ತದೆ.

19.ಮಾನವ ಅಂಗಾಂಗ ವ್ಯಾಪಾರಕ್ಕಾಗಿ ಶಿಕ್ಷೆ

ಯಾರಿಗೆ ಸಂಬಂಧಿದ್ದರೂ- (ಎ) ಮಾನವ ಅಂಗಾಂಗಗಳನ್ನು ಪೂರೈಕೆ ಮಾಡುವುದಕ್ಕೆ, ಪೂರೈಕೆ ಮಾಡುವ ಇಚ್ಚೆಯನ್ನು ವ್ಯಕ್ತಪಡಿಸಿ ಹಣವನ್ನು ಪಡೆಯುವುದು ಕೊಡುವುದು; (ಬಿ) ಹಣಕ್ಕಾಗಿ ತನ್ನ ದೇಹದ ಯಾವುದೇ ಅಂಗಾಂಗಗಳನ್ನು ಮಾರಾಟ ಮಾಡಲು ಇಚ್ಚಿಸುವಂತಹ ವ್ಯಕ್ತಿಯನ್ನು ಹುಡುಕುವುದು. (ಸಿ) ಹಣಕ್ಕಾಗಿ ಯಾವುದೇ ಮಾನವ ಅಂಗಾಂಗವನ್ನು ಪೂರೈಕೆ ಮಾಡಲು ಸಿದ್ದರಿರುವುದು. (ಡಿ) ಹಣಕ್ಕಾಗಿ ಮಾನವ ಅಂಗಾಂಗಗಳನ್ನು ಪೂರೈಕೆ ಮಾಡಲು ಯಾವುದೇ ವ್ಯವಸ್ಥೆ ಮಾಡುವುದು ಒಪ್ಪಂದ ಮಾಡುವುದು ಅಥವಾ ಉಪಕ್ರಮಿಸುವುದು ಅಥವ ಮಾನವ ಅಂಗಾಂಗಗಳನ್ನು ಪೂರೈಕೆ ಮಾಡಲು ಒಪ್ಪಿಕೊಳ್ಳುವುದು.