ಮಾನವ ಅಂಗಾಂಗ ಕಸಿ ಕಾಯಿದೆ


ಕಾನೂನು, ನ್ಯಾಯ ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ ( ಶಾಸಕಾಂಗ ಇಲಾಖೆ) ಹೊಸ ದೆಹಲಿ, ಜುಲೈ 11 ರ 1994 ಈ ಕೆಳಗಿನ ಕಾಯಿದೆಯು ರಾಷ್ಟ್ರಪತಿಗಳ ಅಂಕಿತವನ್ನು ದಿನಾಂಕ 8 ಜುಲೈ 1994 ರಂದು ಪಡೆಯಿತು-ಮತ್ತು ಈ ಮೂಲಕ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ. :-ಮಾನವ ಅಂಗಾಂಗ ಕಸಿ ಕಾಯಿದೆ , 1994 ರ ಸಂಖ್ಯೆ 42 [ ಜುಲೈ 8, 1991]

ಕಾಯಿದೆಯು ಮಾನವ ಅಂಗಾಂಗಳನ್ನು ಚಿಕಿತ್ಸಾ ಉದ್ದೇಶಕ್ಕಾಗಿ ತೆಗೆಯುವುದು, ಸಂಗ್ರಹಿಸುವುದು ಮತ್ತು ಕಸಿ ಮಾಡುವುದಕ್ಕೆ ಮತ್ತು ಮಾನವ ಅಂಗಾಂಗಳ ವಾಣಿಜ್ಯಿಕ ವ್ಯವಹಾರಗಳನ್ನು ತಡೆಗಟ್ಟುವುದಕ್ಕೆ ಅವಕಾಶವನ್ನೊದಗಿಸಿ ಕೊಡುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ವಿಷಯಗಳಿಗೆ ಸಂಬಂಧಿಸಿದೆ. ಅದೇ ರೀತಿ ಇದು ಸಂಧರ್ಬೋಚಿತವಾಗಿ ಮಾನವ ಅಂಗಾಂಗಗಳನ್ನು ಚಿಕಿತ್ಸೆಯ ಉದ್ದೇಶಕ್ಕಾಗಿ ತೆಗೆಯುವಿಕೆ,ಸಂಗ್ರಹಣೆ ಮತ್ತು ಕಸಿ ಮಾಡುವಿಕೆಗಳಿಗೆ ನಿಯಂತ್ರಣಗಳನ್ನೊದಗಿಸಿಕೊಡುತ್ತದೆ ಮತ್ತು ಮಾನವ ಅಂಗಾಂಗಗಳ ವ್ಯಾಪಾರ ವ್ಯವಹಾರಗಳನ್ನು ತಡೆಯುತ್ತದೆ; ಅಲ್ಲದೆ ಅದೇ ರೀತಿಯಲ್ಲಿ ಮೇಲ್ಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್ತು ರಾಜ್ಯಗಳಿಗೆ ಸಂಬಂಧಿಸಿದಂತೆಸಂವಿಧಾನದ ಕಲಮು 249 ಮತ್ತು 250 ಗಳನ್ನು ಹೊರತುಪಡಿಸಿ ಸಂಬಂಧಿಸಿದ ಯಾವುದೇ ಕಾನೂನುಗಳನ್ನು ಮಾಡುವ ಅಧಿಕಾರ ಹೊಂದಿರುವುದಿಲ್ಲ. ಅಲ್ಲದೆಸಂವಿಧಾನದಕಲಮು252ರಉಪನಿಯಮ(1)ದಅನ್ವಯ, ಗೋವಾ,ಹಿಮಾಚಲಪ್ರದೇಶ, ಮತ್ತುಮಹಾರಾಷ್ಟ್ರರಾಜ್ಯಗಳಎಲ್ಲಾಸದನಗಳೂಮೇಲ್ಕಾಣಿಸಿದವಿಷಯಗಳಜಾರಿಗಾಗಿನಡಾವಳಿಯನ್ನುಅನುಮೋದಿಸಿವೆಇದರಂತೆಆಕಾಯಿದೆಗಳುಸಂಸತ್ತಿನನಿಯಮಗಳಂತೆನಿಯಂತ್ರಿಸಲ್ಪಡುತ್ತವೆ. ಭಾರತಗಣರಾಜ್ಯದನಲವತ್ತೈದನೇದಿನದಂದುಸಂಸತ್ತಿನಿಂದಈಕೆಳಕಂಡಂತೆ . ಜಾರಿಗೊಳಿಸಲ್ಲಪಟ್ಟಿವೆ.

ಶೀರ್ಷಿಕೆ 1
ಶೀರ್ಷಿಕೆ 1, ಅನ್ವಯಿಕತೆ ಮತ್ತು ಪ್ರಾರಂಭ

(1) ಈ ಕಾಯಿದೆಯನ್ನು ಮಾನವ ಅಂಗಾಂಗಗಳ ಕಸಿ ಕಾಯಿದೆ 1994 ಎಂದು ಕರೆಯಬಹುದಾಗಿದೆ. 2. ಇದು ಮೊದಲನೆಯದಾಗಿ ಇಡಿಯಾಗಿ ಗೋವಾ, ಹಿಮಾಚಲಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಅನ್ವಯವಾಗುತ್ತದೆ ಮತ್ತು ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಹ ಅನ್ವಯವಾಗುತ್ತದೆ ಅಲ್ಲದೆ ಈ ಕಾಯಿದೆಯು ಕಲಮು 252 ರ ಉಪಕಲಮು(1)ರಂತೆ ಇದನ್ನು ನಿರ್ಣಯದ ಮೂಲಕ ಅಳವಡಿಸಿಕೊಳ್ಳುವಂತಹ ರಾಜ್ಯಗಳಿಗೂ ಅನ್ವಯವಾಗುತ್ತದೆ. 3. ಇದು ಗೋವಾ, ಹಿಮಾಚಲ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದ ನಂತರ ಅಥವಾ ದಿನಾಂಕದಂದು ಬೇರೆ ರಾಜ್ಯಗಳಲ್ಲಿ ಸಂವಿಧಾನದ ಕಲಮು 252 ರಉಪಕಲಮು (1) ನೇಮಕ ಮಾಡಿದಾಗ ಕಜಾರಿಗೆ ಬರುತ್ತದೆ ಇಂತಹ ಅಳವಡಿಕೆಯ ದಿನಾಂಕ ಮತ್ತು ಈ ಕಾಯಿದೆಗೆ ಸಂಬಂಧಿಸಿದಂತೆ ಪ್ರಾರಂಭಿಸುವ ಯಾವುದೇ ಉಲ್ಲೇಖವನ್ನು ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶ ಗಳಲ್ಲಿ ಮಾಡಬಹುದಾಗಿದೆ ಅಥವ ಅಂತಹ ದಿನಾಂಕದಿಂದ ಇದು ಜಾರಿಗೆ ಬರುತ್ತದೆ.

ವಿವರಣೆ 2

ಈ ಕಾಯಿದೆಯಲ್ಲಿ, ಸಾಂಧರ್ಬಿಕ ಅಗತ್ಯದಂತೆ: (ಎ) “ಪ್ರಚಾರಗಳು” ಸೇರಿದಂತೆ ಯಾವುದೇ ರೀತಿಯಲ್ಲಾದರೂ ಸಾರ್ವಜನಿಕರಿಗೆ ತಿಳಿಯಪಡಿಸಬಹುದಾಗಿದೆ ಅಥವ ಸಾರ್ವಜನಿಕವಾದ ಯಾವುದೇ ವಿಭಾಗದಲ್ಲಿ ಅಥವಾ ಆಯ್ದ ವ್ಯಕ್ತಿಗಳಿಗೆ ತಿಳಿಸಬಹುದಾಗಿದೆ. (ಬಿ) “ಸೂಕ್ತ ಪ್ರಾಧಿಕಾರ” ವೆಂದರೆ ಯಾವುದೇ ಪ್ರಾಚಾರದ ಅದು ಸಾರ್ವಜನಿಕ ಅಥವಾ ಯಾವುದೇ ಆಯ್ದ ಸಾರ್ವಜನಿಕ ಅಥವಾ ಸೆಕ್ಷನ್ 13 ರಡಿಯಲ್ಲಿ ನೇಮಕಗೊಂಡ ಅಥವಾ ವೈಯಕ್ತಿಕವಾಗಿ ಆಯ್ಕೆಯಾದವರಿರಬಹುದು. (ಇ) “ಮೃತ ವ್ಯಕ್ತಿ” ಎಂದರೆ ಯಾವುದೇ ವ್ಯಕ್ತಿಯು ಜೀವ ಇಲ್ಲದಂತೆ ಶಾಶ್ವತವಾಗಿ ಮೆದುಳು ಸಾವಿನ ಕಾರಣದಿಂದ ಅಥವಾ ಜೀವಂತ ಇರುವ ವ್ಯಕ್ತಿಯ ಹೃದಯ- ಬಡಿತ ಯಾವುದೇ ಸಮಯದಲ್ಲಿ ಇಲ್ಲವಾಗುವುದು; (ಐ) “ದಾನಿ” ಎಂದರೆ ಹದಿನೆಂಟು ವರ್ಷಕ್ಕಿಂತ ಕಡಿಮೆ ಇಲ್ಲದ ಯಾವುದೇ ವ್ಯಕ್ತಿ, ಸ್ವ ಇಚ್ಚೆಯಿಂದ ಅವನ ಮಾನವ ಅಂಗಾಗಗಳನ್ನು ಚಿಕಿತ್ಸಾ ಉದ್ದೇಶಕ್ಕಾಗಿ ಸೆಕ್ಷನ್ 3 ಸೆಕ್ಷನ್(1) ಅಥವಾ ಸಬ್-ಸೆಕ್ಷನ್(2) ರಡಿಯಲ್ಲಿ ತೆಗೆಯುವುದು. (ಜಿ) “ಆಸ್ಪತ್ರೆ” ಯಲ್ಲಿ ನರ್ಸಿಂಗ್ ಹೋಮ್, ಕ್ಲಿನಿಕ್, ವೈದ್ಯಕೀಯ ಕೇಂದ್ರ, ಅಥವಾ ವೈದ್ಯಕೀಯ ಅಥವಾ ಚಿಕಿತ್ಸಾ ಉದ್ದೇಶದ ಬೋಧನಾ ಸಂಸ್ಥೆಗಳು ಮತ್ತು ಅಂತಹುದೇ ಸಂಸ್ಥೆಗಳು ಸೇರುತ್ತವೆ. (ಹೆಚ್) “ಮಾನವ ಅಂಗಾಂಗ”ಗಳು ಎಂದರೆ ಪೂರ್ಣವಾಗಿ ವ್ಯಸ್ಥಿತ ಅಂಗಾಂಶಗಳಿಂದ ನಿರ್ಮಿತವಾದ ಮಾನವ ಶರೀರದಿಂದ ಇಡಿಯಾಗಿ ತೆಗೆಯಬಹುದಾದಂತಹ, ಶರೀರದಿಂದ ಪುನರ್ ನಿರ್ಮಾಣಗೊಳ್ಳಲಾಗದಂತಹ ಶರೀರದ ಒಂದು ಭಾಗ ಎಂಬುದಾಗಿರುತ್ತದೆ. (ಐ) “ಹತ್ತಿರದ ಸಂಬಂಧಿ” ಎಂದರೆ ಹೆಂಡತಿ,ಮಗ,ಮಗಳು,ತಂದೆ,ತಾಯಿ, ಸಹೋದರ,ಅಥವಾ ಸಹೋದರಿ (ಜೆ) “ ಅಧಿಸೂಚನೆ” ಎಂದರೆ ಅಧಿಕೃತವಾಗಿ ಗೆಝೆಟ್ ನಲ್ಲಿ ಪ್ರಕಟಿತವಾಗುವುದು. (ಕೆ) “ ಸಂದಾಯ” ಎಂದರೆ ಹಣ ಸಂದಾಯ ಮಾಡುವುದು ಅಥವಾ ಹಣದ ಬೆಲೆಬಾಳುವ ಆದರೆ ಹಿಂತಿರುಗಿಸಲಾಗದ ಅಥವಾ ವಹಿಸಲಾಗದ ಸಂದಾಯ ಎಂದು- (i) ಪೂರೈಸಲಾಗುವ ಮಾನವ ಅಂಗಾಂಗವನ್ನು ತೆಗೆಯುವ ವೆಚ್ಚ, ಸಾಗಾಣಿಕೆ ಅಥವಾ ಸಂರಕ್ಷಣೆ ಮಾಡುವ ವೆಚ್ಚಗಳು : ಅಥವಾ (ii) ತನ್ನ ದೇಹದಿಂದ ಮಾನವ ಅಂಗಾಂಗಗಳನ್ನು ತೆಗೆದಿದ್ದಕ್ಕೆ ವ್ಯಕ್ತಿಗೆ ಆಗುವ ದುಡಿಮೆಯ ನಷ್ಟಕ್ಕೆ ಅವನು ಮಾನವ ಅಂಗಾಂಗಗಳನ್ನು ಪೂರೈಕೆ ಮಾಡಿದ್ದಕ್ಕಾಗಿ ಪ್ರತ್ಯಕ್ಷವಾಗಿ ಸಕಾರಣವಾಗಿ ನೀಡಲಾಗುವುದು. (ಎಲ್) “ ನಿರ್ಧಿಷ್ಟಪಡಿಸಿದ” ಎಂದರೆ ಈ ಕಾಯಿದೆ ಅಡಿಯಲ್ಲಿ ನಿರ್ಧಿಷ್ಟಪಡಿಸಲಾದ ಕಾನೂನುಗಳು. (ಎಮ್) “ಪಡೆದುಕೊಳ್ಳುವವರು” ಎಂದರೆ ಯಾವ ವ್ಯಕ್ತಿಗೆ ಮಾನವ ಅಂಗದ ಅವಶ್ಯಕತೆಯಿದ್ದು ಅಥವಾ ಕಸಿ ಮಾಡಲು ಉದ್ದೇಶಿಸಲಾಗಿದೆಯೋ ಅವರು. (ಎನ್) “ ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಷನರ್’ ಎಂದರೆ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಆಕ್ಟ್ 1956 ರ ಸೆಕ್ಷನ್-2 ಕ್ಲಾಸ್(ಹೆಚ್) ಅಡಿಯಲ್ಲಿ ಅಂಗೀಕೃತ ವೈದ್ಯಕೀಯ ಅರ್ಹತೆಯನ್ನು ಹೊಂದಿರುವ ವೈದ್ಯಕೀಯ ವೃತ್ತಿಪರ ಮತ್ತು ಕ್ಲಾಸ್(ಕೆ)ಯಲ್ಲಿ ತಿಳಿಸಿರುವಂತೆ ರಾಜ್ಯ ಮೆಡಿಕಲ್ ರಿಜಿಸ್ಟರ್ ನಲ್ಲಿ ನೋಂದಾಯಿಸಿಕೊಂಡಿರುವ ವ್ಯಕ್ತಿ. (ಓ) “ ಚಿಕಿತ್ಸಾ ಉದ್ದೇಶಗಳು” ಎಂದರೆ ಯಾವುದೇ ಖಾಯಿಲೆಯ ವ್ಯವಸ್ಥಿತ ಚಿಕಿತ್ಸೆ ಅಥವಾ ಯಾವುದೇ ನಿರ್ಧಿಷ್ಟ ಪದ್ದತಿ ಅಥವಾ ವಿಧಾನಗಳಂತೆ ಆರೋಗ್ಯವನ್ನು ಸುಧಾರಿಸುವುದು. (ಪಿ) “ ಟ್ರಾನ್ಸ್ ಪ್ಲಾಂಟೇಷನ್/ ಕಸಿ ಮಾಡುವುದು” ಎಂದರೆ ಯಾವುದೇ ಜೀವಂತ ವ್ಯಕ್ತಿ ಅಥವಾ ಮೃತ ವ್ಯಕ್ತಿಯಿಂದ ಬೇರೆ ಜೀವಂತ ವ್ಯಕ್ತಿಗೆ ವೈದ್ಯಕೀಯ ಉದ್ದೇಶಕ್ಕಾಗಿ ಯಾವುದೇ ಮಾನವ ಅಂಗಾಂಗವನ್ನು ಕಸಿ ಮಾಡುವುದು.