ಮಾನವ ಅಂಗಾಂಗ ಕಸಿ ಕಾಯಿದೆ


ಅಧ್ಯಾಯ IV ಸೂಕ್ತ ಪ್ರಾಧಿಕಾರ
13. ಸೂಕ್ತ ಪ್ರಾಧಿಕಾರ

ಸೂಕ್ತ ಪ್ರಾಧಿಕಾರ 13 (1) ಕೇಂದ್ರ ಸರ್ಕಾರವು, ಅಧಿಸೂಚನೆಯ ಮೂಲಕ ಒಬ್ಬ ಅಥವಾ ಹೆಚ್ಚಿನ ಅಧಿಕಾರಿಗಳನ್ನು ಸೂಕ್ತ ಪ್ರಾಧಿಕಾರವನ್ನಾಗಿ ಪ್ರತಿಯೊಂದು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಕಾಯಿದೆಯ ಉದ್ದೇಶಕ್ಕಾಗಿ ನೇಮಕ ಮಾಡುತ್ತದೆ. (2) ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಒಬ್ಬರು ಅಥವ ಹೆಚ್ಚಿನ ಅಧಿಕಾರಿಗಳನ್ನು ಈ ಕಾಯಿದೆಯ ಸೂಕ್ತ ಪ್ರಾಧಿಕಾರದ ಉದ್ದೇಶಕ್ಕಾಗಿ ನೇಮಕ ಮಾಡುತ್ತದೆ. (3) ಸೂಕ್ತ ಪ್ರಾಧಿಕಾರವು ಈ ಕೆಳಗಿನ ಕಾರ್ಯಗಳನ್ನು ಮಾಡುತ್ತದೆ ಅವುಗಳೆಂದರೆ : (i) ಸೆಕ್ಷನ್ 15 ರ ಸಬ್ ಸೆಕ್ಷನ್(1)ರಡಿಯಲ್ಲಿ ನೋಂದಾಣಿಯನ್ನು ಮಾಡುವುದು ಅಥವಾ ಆ ಸೆಕ್ಷನ್ ನ ಸಬ್ ಸೆಕ್ಷನ್(3)ರಡಿಯಲ್ಲಿ ನವೀಕರಣ ಮಾಡುವುದು. (ii) ಸೆಕ್ಷನ್ 16 ರ ಸಬ್ ಸೆಕ್ಷನ್(2) ರಡಿಯಲ್ಲಿ ನೋಂದಣಿಯನ್ನು ರದ್ದುಪಡಿಸುವುದು ಅಥವಾ ಅಮಾನತು ಮಾಡುವುದು. (iii) ಮಾನವ ಅಂಗಾಂಗಗಳನ್ನು ತೆಗೆಯುವ, ಸಂರಕ್ಷಿಸುವ ಮತ್ತು ಕಸಿ ಮಾಡುವುದರಲ್ಲಿ ನಿರತವಾಗಿರುವ ಆಸ್ಪತ್ರೆಗಳಿಗೆ ನಿರ್ಧಿಷ್ಟಪಡಿಸಲಾದ ಮಾನದಂಡಗಳನ್ನು ಅನುಷ್ಟಾನಗೊಳಿಸಲು (iv) ಈ ಕಾಯಿದೆಯ ಯಾವುದೇ ಉಲ್ಲಂಘನೆಯ ದೂರುಗಳನ್ನು ತನಿಖೆ ಮಾಡಲು ಅಥವಾ ಮಾಡಲಾಗಿರುವ ಯಾವುದೇ ಕಾಯಿದೆಗಳನ್ನು ಉಲ್ಲಂಘಿಸಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು. (v) ಕಸಿಯ ಗುಣಮಟ್ಟವನ್ನು ನೋಡಲು ಆಗಾಗ್ಗೆ ಆಸ್ಪತ್ರೆಗಳ ಪರಿವೀಕ್ಷಣೆ ಮಾಡುವುದು ಮತ್ತು ಕಸಿಗೆ ಒಳಪಟ್ಟ ಮತ್ತು ಅಂಗಾಂಗ ದಾನ ಮಾಡಿದ ವ್ಯಕ್ತಿಗಳ ವೈದ್ಯಕೀಯ ಕಾಳಜಿಗಾಗಿ ಅನುಸರಣೆ ಮಾಡುವುದು, ಮತ್ತು (vi) ನಿರ್ಧಿಷ್ಟಪಡಿಸಿದ ಇತರೆ ಮಾನದಂಡಗಳಿಗಾಗಿ ಕ್ರಮ ಕೈಗೊಳ್ಳುವುದು

ಅಧ್ಯಾಯ V ಆಸ್ಪತ್ರೆಗಳ ನೋಂದಣಿ
14. ಮಾನವ ಅಂಗಾಂಗಗಳನ್ನು ತೆಗೆಯುವುದು, ಸಂಗ್ರಹಣೆ ಮಾಡುವುದು ಮತ್ತು ಕಸಿ ಮಾಡುವುದಕ್ಕಾಗಿ ಆಸ್ಪತ್ರೆಗಳ ನೋಂದಣಿ ಮಾಡಿಸುವುದು

(1) ಈ ಕಾಯಿದೆಯಡಿಯಲ್ಲಿ ನೋಂದಣಿ ಮಾಡಿಕೊಳ್ಳದೆ ಯಾವುದೇ ಆಸ್ಪತ್ರೆಗಳು ವೈದ್ಯಕೀಯ ಉದ್ದೇಶಗಳಿಗಾಗಿ ಅಂಗಾಂಗಗಳನ್ನು ತೆಗೆಯುವುದು,ಸಂಗ್ರಹಿಸುವುದು ಅಥವಾ ಕಸಿ ಮಾಡುವ ಚಟುವಟಿಕೆಗಳನ್ನು ಪ್ರಾರಂಭಿಸುವಂತಿಲ್ಲ. ಈ ಕಾಯಿದೆಯ ಪ್ರಾರಂಭಕ್ಕೆ ಮುಂಚಿತವಾಗಿ ಭಾಗಶಃ ಅಥವಾ ಪರಿಪೂರ್ಣವಾಗಿ ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡುತ್ತಿರುವ ಎಲ್ಲಾ ಆಸ್ಪತ್ರೆಗಳು ಪ್ರಾರಂಭಕ್ಕೆ ಮುಂಚೆ ಅರವತ್ತು ದಿನಗಳಿಗೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಮುಂದುವರಿದು, ಮಾನವ ಅಂಗಾಂಗಗಳನ್ನು ತೆಗೆಯುವ, ಸಂಗ್ರಹಿಸುವ ಅಥವಾ ಕಸಿ ಮಾಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿ ಆಸ್ಪತ್ರೆಯು ಈ ಕಾಯಿದೆ ಪ್ರಾರಂಭದ ದಿನಾಂಕಕ್ಕಿಂತ ಮೂರು ತಿಂಗಳ ಒಳಗೆ ಅರ್ಜಿ ಸಲ್ಲಿಸಿದ್ದು ಅಥವಾ ಯಾವುದು ಮುಂಚಿತವೋ ಅದು ಅಥವಾ ಅವಧಿ ಮೀರುವಿಕೆಯ ಮುಂಚೆ ನವೀಕರಿಸದೇ ಇದ್ದಲ್ಲಿ ಅದನ್ನು ಅಮಾನ್ಯಗೊಳಿಸಲಾಗುತ್ತದೆ. (2) ಸಬ್ ಸೆಕ್ಷನ್ (1)ರಡಿಯಲ್ಲಿ ಸೂಕ್ತ ಪ್ರಾಧಿಕಾರಕ್ಕೆ ಸಲ್ಲಿಸಲಾಗಿರುವ ನಿಗಧಿತ ನಮೂನೆಯಲ್ಲಿ ಸೂಕ್ತವಾಗಿ ಭರ್ತಿ ಮಾಡಲಾದ ನೋಂದಣಿಯ ಪ್ರತಿ ಅರ್ಜಿಯನ್ನು ಸಲ್ಲಿಸಬೇಕು. (3) ಸೂಕ್ತ ಪ್ರಾಧಿಕಾರದಿಂದ ಇಂತಹ ಆಸ್ಪತ್ರೆಗಳು ಅಗತ್ಯ ವಿಶೇಷ ಸೇವೆಗಳನ್ನು ನೀಡಲು ಸಮರ್ಥವಾಗಿವೆ ಎಂಬುದನ್ನು ಸಂತೃಪ್ತಗೊಳಿಸದೆ ಈ ಕಾಯಿದೆಯಡಿಯಲ್ಲಿ ಯಾವುದೇ ಆಸ್ಪತ್ರೆ ನೋಂದಣಿಯಾಗುವುದಿಲ್ಲ.

15. ನೋಂದಣಿ ಪ್ರಮಾಣ ಪತ್ರ

(1) ಸೂಕ್ತ ಪ್ರಾಧಿಕಾರವು ವಿಚಾರಣೆ ಮಾಡಿದ ನಂತರ ಸಲ್ಲಿಸಿರುವ ಅರ್ಜಿಯಲ್ಲಿ ಕಾಯಿದೆಗೆ ಅಗತ್ಯವೆನಿಸುವ ಅಂಶಗಳಿವೆಯೆಂದು ಕಂಡುಬಂದಲ್ಲಿ ಮಾಡಿರುವ ಕಾನೂನುಗಳಿಗೆ ಅನುಗುಣವಾಗಿವೆ ಎನಿಸಿದಲ್ಲಿ ಆಸ್ಪತ್ರೆಗಳಿಗೆ ಪ್ರಮಾಣ ಪತ್ರವನ್ನು ನಿರ್ಧಿಷ್ಟ ಪಡಿಸಿದ ಅವಧಿಯವರೆಗೆ ನಿಯಮಗಳೆ ಒಳಪಟ್ಟಂತೆ ನೀಡಬಹುದಾಗಿದೆ. (2) ಅರ್ಜಿದಾರರಿಗೆ ಕೇಳಲಾದ ಎಲ್ಲಾ ವಿಚಾರಣೆಗಳ ನಂತರ ಸೂಕ್ತ ಕಾನೂನುಗಳಿಗನುಗುಣವಾಗಿವೆ ಎಂದು ಪ್ರಾಧಿಕಾರಕ್ಕೆ ಸಮಂಜಸವೆನಿಸಿದರೆ ಅದು ಲಿಖಿತವಾಗಿ ದಾಖಲೆ ಮಾಡಿಕೊಂಡು ನೀಡಬಹುದು ಅಥವಾ ತಿರಸ್ಕರಿಸಬಹುದಾಗಿದೆ. (3) ಪ್ರತಿ ನೋಂದಣಿ ಪ್ರಮಾಣ ಪತ್ರವನ್ನೂ ನಿಗಿಧಿತ ಮೊತ್ತ ವನ್ನು ಸಲ್ಲಿಸಿ ನವೀಕರಣ ಮಾಡಿಕೊಳ್ಳಬಹುದು.

16.ನೋಂದಣಿಯ ಅಮಾನತು ಅಥವಾ ರದ್ದುಪಡಿಸುವಿಕೆ

(1) ಸೂಕ್ತ ಪ್ರಾಧಿಕಾರವು ಸ್ವಯಂ ಇಚ್ಚೆಯಿಂದ ಅಥವಾ ದೂರುಗಳನ್ವಯ, ನೋಟೀಸುಗಳನ್ನು ಯಾವುದೇ ಆಸ್ಪತ್ರಗೆ ನೋಂದಣಿಯನ್ನು ಈ ಕಾಯಿದೆಯಡಿಯಲ್ಲಿ ಏಕೆ ಸಕಾರಣವನ್ನು ನೀಡಿ ಏಕೆ ರದ್ದುಪಡಿಸಬಾರದು ಅಥವಾ ಅಮಾನತು ಮಾಡಬಾರದು ಎಂದು ನೋಟೀಸನ್ನು ಕೊಡಬಹುದು. (2) ಆಸ್ಪತ್ರೆಗಳ ಅಹವಾಲನ್ನು ಕೇಳಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡಿದ ನಂತರವೂ, ಸೂಕ್ತ ಪ್ರಾಧಿಕಾರಕ್ಕೆ ಕಾನೂನುಗಳ ಉಲ್ಲಂಘನೆಯಾಗಿರುವುದು ಕಂಡುಬಂದರೆ, ಅದು ಯಾವುದೇ ಪೂರ್ವಾಗ್ರಹವಿಲ್ಲದೆ ಯಾವುದೇ ಕ್ರಿಮಿನಲ್ ಕ್ರಮವನ್ನು ಅಂತಹ ಆಸ್ಪತ್ರೆಗಳ ವಿರುದ್ಧ ತೆಗೆದುಕೊಳ್ಳಬಹುದಾಗಿದೆ ಅದೆಂದರೆ ಅದರ ನೋಂದಣಿಯನ್ನು ನಿರ್ಧಿಷ್ಟ ಸಮಯದವರೆಗೆ ಅಮಾನತು ಮಾಡುವುದು ಅಥವ ಅದನ್ನು ರದ್ದುಪಡಿಸುವ ಯೋಚನೆಯನ್ನೂ ಸಹ ಮಾಡಬಹುದು. ಸೂಕ್ತ ಪ್ರಾಧಿಕಾರಕ್ಕೆ ಆ ರೀತಿ ಮಾಡುವುದು ಸಮಯೋಚಿತವೆನಿಸುವಂತಹ ಕ್ರಮ ತೆಗೆದುಕೊಳ್ಳುವುದು ಸಾರ್ವಜನಿಕ ಹಿತಾಸಕ್ತಿಯಿಂದ ಅಗತ್ಯವೆನಿಸಿದಲ್ಲಿ ಅದು ಈ ಕಾರಣಗಳನ್ನು ಲಿಖಿತವಾಗಿ ದಾಖಲೆ ಮಾಡಿಕೊಂಡು, ಯಾವುದೇ ಆಸ್ಪತ್ರೆಯ ನೋಂದಣಿಯನ್ನು ಯಾವುದೇ ಸೂಚನೆಯನ್ನು ನೀಡದೆ ರದ್ದುಪಡಿಸಬಹುದು.