ಮಾನವ ಅಂಗಾಂಗ ಕಸಿ ಕಾಯಿದೆ


5.ಆಸ್ಪತ್ರೆ ಅಥವಾ ಬಂಧೀಖಾನೆಗಳಲ್ಲಿನ ಸ್ವೀಕೃತವಾಗದ /ವಾರಸುದಾರರಿಲ್ಲದ ಶವಗಳ ಪ್ರಕರಣಗಳಲ್ಲಿ ಮಾನವ ಅಂಗಾಂಗಗಳನ್ನು ತೆಗೆಯುವ ಅಧಿಕಾರ

(1) ಆಸ್ಪತ್ರೆ ಅಥವಾ ಬಂಧೀಖಾನೆಯಲ್ಲಿ ಮೃತ ದೇಹವೊಂದು ಯಾವುದೇ ಹತ್ತಿರದ ವಾರಸುದಾರರಿಲ್ಲದೇ ಮೃತರಾದ ನಂತರ ನಲವತ್ತೆಂಟು ಗಂಟೆಯವರೆಗೆ ಹಾಗೇ ಇದ್ದಲ್ಲಿ ಆಗ ಅಂತಹ ದೇಹದಿಂದ ಅಂಗಾಂಗಗಳನ್ನು ತೆಗೆಯಲು ಅಧಿಕಾರವನ್ನು ನೀಡಬಹುದಾಗಿದೆ ಇದಕ್ಕಾಗಿ ಕಾರ್ಯನಿರತವಾಗಿರುವ ವ್ಯಕ್ತಿ ಅಥವಾ ಇಂತಹ ಆಸ್ಪತ್ರೆಯ ಅಥವಾ ಬಂಧೀಖಾನೆಯ ಒಬ್ಬ ನೌಕರ ಆ ಸಮಯದಲ್ಲಿ ಆಸ್ಪತ್ರೆ ಅಥವಾ ಬಂಧೀಖಾನೆಯ ವ್ಯಕ್ತಿ ಅಥವಾ ನೌಕರರು ಆ ಮೃತ ವ್ಯಕ್ತಿಯ ಪರವಾಗಿ ನಿಯಂತ್ರಣದಲ್ಲಿರುವ ಪ್ರಾಧಿಕಾರಕ್ಕೆ ನಿಗಧಿತ ನಮೂನೆಯನ್ನು ಭರ್ತಿ ಮಾಡಿ ಕೊಡಬೇಕಾಗುತ್ತದೆ. (2) ಮೃತ ವ್ಯಕ್ತಿಯ ಮೃತ ದೇಹವನ್ನು ಹೊಂದಬಹುದಾದ ಅಧಿಕಾರವನ್ನು ಹೊಂದಿದ್ದಾನೆಂದು ನಂಬಲಾಗುವ ವ್ಯಕ್ತಿ ವ್ಯಕ್ತಿಯೊಬ್ಬನು ಈ ರೀತಿಯಲ್ಲಿ ಮುಂದೆ ಬರದ ಹೊರತು ಇಂತಹ ಅಧಿಕಾರವನ್ನು ನೀಡಲು ಯಾವುದೇ ಪ್ರಾಧಿಕಾರಕ್ಕೆ ಸಬ್-ಸೆಕ್ಷನ್(1) ರಡಿಯಲ್ಲಿ ಅಧಿಕಾರವಿರುವುದಿಲ್ಲ.

6.ವೈದ್ಯಕೀಯ ಕಾನೂನು ಅಥವಾ ರೋಗ ಪತ್ತೆಯ ಉದ್ದೇಶಕ್ಕಾಗಿ ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿರುವ ದೇಹದಿಂದ ಮಾನವ ಅಂಗಾಂಗಗಳನ್ನು ತೆಗೆಯುವುದು.

ವ್ಯಕ್ತಿಯೊಬ್ಬನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳಿಸಿರುವಾಗ:- (ಎ) ವ್ಯಕ್ತಿಯೊಬ್ಬ ಅಪಘಾತ ಅಥವಾ ಬೇರೆ ಯಾವುದೇ ಅನೈಸರ್ಗಿಕ ಕಾರಣಗಳಿಂದ ಸತ್ತಿದ್ದರೆ ಅಂತಹ ವ್ಯಕ್ತಿಯ ಸಾವಿನ ಕಾರಣವನ್ನು ವೈದ್ಯಕೀಯ ಕಾನೂನು ಉದ್ದೇಶಕ್ಕಾಗಿ ತಿಳಿಯಲು ; ಅಥವಾ (ಬಿ) ರೋಗಗಳ ಉದ್ದೇಶಕ್ಕಾಗಿ , ವ್ಯಕ್ತಿಯು ಈ ಕಾಯಿದೆಯಡಿಯಲ್ಲಿ ಇಂತಹ ಮೃತ ದೇಹದಿಂದ ಯಾವುದೇ ಮಾನವ ಅಂಗಾಂಗಗಳನ್ನು ತೆಗೆಯಲು ಅರ್ಹನಾಗುತ್ತಾನೆ, ಆ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ಯಾವ ಉದ್ದೇಶಕ್ಕಾಗಿ ನಡೆಸಲಾಗುತ್ತಿದೆಯೋ ಅಂತಹದಕ್ಕೆ ಅಗತ್ಯವಿಲ್ಲವೆಂದು ಕಂಡುಬಂದಾಗ, ಮೃತ ವ್ಯಕ್ತಿಯ ಮಾನವ ಅಂಗಾಂಗಗಳನ್ನು ವೈದ್ಯಕೀಯ ಉದ್ದೇಶಕ್ಕಾಗಿ ತೆಗೆಯಬಹುದಾಗಿದೆ, ಆದರೆ ಮೃತ ವ್ಯಕ್ತಿಯು ತಾನು ಸಾಯುವುದಕ್ಕೆ ಮುಂಚಿತವಾಗಿ ತನ್ನ ದೇಹದ ಅಂಗಾಂಗಗಳನ್ನು ವೈದ್ಯಕೀಯವಾಗಿ ಉಪಯೋಗಿಸಿಕೊಳ್ಳಲು ಹೇಳಿದ್ದಲ್ಲಿ ಅವನ ಮರಣದ ನಂತರ ಇಂತಹ ಅಧಿಕಾರವಿರುವವರು ಅವನ ಮರಣಕ್ಕೆ ಮುಂಚಿತವಾಗಿ ತೆಗೆಯದಿದ್ದಲ್ಲಿ ತೆಗೆಯ ಬಹುದಾಗಿದೆ.

7. ಮಾನವ ಅಂಗಾಂಗಗಳ ಸಂರಕ್ಷಣೆ

ಯಾವುದೇ ವ್ಯಕ್ತಿಯ ದೇಹದಿಂದ ಯಾವುದೇ ಅಂಗಾಂಗಗಳನ್ನು ತೆಗೆದ ನಂತರ ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಷನರ್ ಗಳು ಹಾಗೆ ತೆಗೆದ ಮಾನವ ಅಂಗಾಂಗಗಳನ್ನು ಸಂರಕ್ಷಣೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.

8. ಉಳಿತಾಯಗಳು

(1) ಮುಂಬರುವ ಈ ಕಾಯಿದೆಯ ಯಾವುದೇ ಅವಕಾಶಗಳನ್ನು ಕಾನೂನು ಬಾಹಿರವಾದ ಯಾವುದೇ ಮೃತ ದೇಹದ ವ್ಯವಹಾರಕ್ಕೆ ಬಳಸುವಂತಿಲ್ಲ ಇಂತಹ ಯಾವುದೇ ವ್ಯವಹಾರಗಳು ಈ ಕಾಯಿದೆಯನ್ನು ಅಂಗೀಕರಿಸದಿದ್ದಲ್ಲಿ ಅವು ಅನುಷ್ಟಾನಗೊಳ್ಳುವುದಿಲ್ಲ.

(2) ಯಾವುದೇ ಸೌಲಭ್ಯಗಳನ್ನು ನೀಡುವುದು ಅಥವಾ ಮೃತ ದೇಹದಿಂದ ಯಾವುದೇ ಅಂಗಾಗಗಳನ್ನು ತೆಗೆಯುವ ಅಧಿಕಾರವನ್ನು ಈ ಕಾಯಿದೆಯಡಿಯಲ್ಲಿ ನೀಡಿರುವುದಿಲ್ಲ ಅಥವಾ ಇಂತಹ ಅಧಿಕಾರಕಾರವನ್ನು ಪಡೆದುಕೊಂಡಿರುವ ಯಾವುದೇ ವ್ಯಕ್ತಿಯು ಮಾನವ ಅಂಗಾಂಗಗಳನ್ನು ತೆಗೆಯುವುದು ಇಂಡಿಯನ್ ಪಿನಲ್ ಕೋಡ್ ಸೆಕ್ಷನ್ 297ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ.