ಮಾನವ ಅಂಗಾಂಗ ಕಸಿ ಕಾಯಿದೆ


9.ಮಾನವ ಅಂಗಾಂಗಗಳನ್ನು ತೆಗೆಯುವುದು ಮತ್ತು ಕಸಿ ಮಾಡುವುದರ ಮೇಲಿನ ನಿರ್ಭಂಧಗಳು

(1) ಸಬ್ ಸೆಕ್ಷನ್(3) ಅಡಿಯಲ್ಲಿ ಕೊಡ ಮಾಡಲಾಗಿರುವಂತೆ ಉಳಿತಾಯ ಮಾಡುವುದು, ಯಾವುದೇ ಮಾನವ ಅಂಗಾಂಗಗಳನ್ನು ಮರಣದ ನಂತರ ಪಡೆದುಕೊಳ್ಳುವವರಿಗೆ ದಾನಿಯ ಮರಣಕ್ಕೆ ಮುಂಚಿತವಾಗಿ ಕಸಿ ಮಾಡುವುದನ್ನು ದಾನಿಯ ಹತ್ತಿರದ ಸಂಭಂಧಿಯಾಗಿರದ ಹೊರತು ಮಾಡುವಂತಿಲ್ಲ. (2) ಯಾವುದೇ ದಾನಿಯು ತನ್ನ ಮರಣದ ನಂತರ ತನ್ನ ದೇಹದ ಯಾವುದೇ ಅಂಗಗಳನ್ನು ತೆಗೆಯಲು ಅಧಿಕಾರ ನೀಡಿದರೆಈ ರೀತಿಯ ಮಾನವ ಅಂಗಾಂಗಗಳ ತೆಗೆದು ಅಗತ್ಯವಿರುವ ಸ್ವೀಕರಿಸುವವರ ದೇಹಕ್ಕೆ ಕಸಿ ಮಾಡಬಹುದಾಗಿದೆ. (3) ಯಾವುದೇ ದಾನಿಯು ತನ್ನ ಸಾವಿನ ನಂತರ ಮಾನವ ಅಂಗಾಂಗಗಳನ್ನು ಸೆಕ್ಷನ್ 3 ಸಬ್-ಸೆಕ್ಷನ್(1)ರಡಿಯಲ್ಲಿ ಅಂಗಾಂಗಗಳ ಅಗತ್ಯವಿರುವಂತಹ ಸ್ವೀಕರಿಸುವವರಿಗಾಗಿ ತೆಗೆಯಲು ಅಧಿಕಾರ ನೀಡಿದೆ ದಾನಿಯಿಂದ ನಿರ್ಧಿಷ್ಟ ಪಡಿಸಿದಂತೆ ಸ್ವೀಕರಿಸುವವರು ಹತ್ತಿರದ ಸಂಬಂಧಿಯಾಗಿಲ್ಲದಿದ್ದು ಪಡೆದುಕೊಳ್ಳುವವರ ಕಡೆಗೆ ಪ್ರೀತಿ ಅಥವಾ ಬಾಂಧವ್ಯ ಹೊಂದಿದ್ದಲ್ಲಿ ಅಥವಾ ವಿಶೇಷ ಕಾರಣಗಳನ್ನು ಹೊಂದಿಲ್ಲದಿದ್ದಲ್ಲಿ ಅಧಿಕೃತ ಸಮಿತಿಯಿಂದ ಪೂರ್ವಾನುಮತಿ ಪಡೆದುಕೊಳ್ಳದೆ ಮಾಡುವಂತಿಲ್ಲ. (4) (ಎ) ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ರಚನೆ ಮಾಡಿರುವಂತೆ, ಒಂದು ಅಥವಾ ಹೆಚ್ಚು ಪ್ರಮಾಣೀಕರಣ ಸಮಿತಿಗಳನ್ನು ರಚಿಸಿದೆ. ಇದರಲ್ಲಿ ಕೇಂದ್ರ ಸರ್ಕಾರವು ನಾಮ ನಿರ್ದೇಶನ ಮಾಡಿರುವ ಸದಸ್ಯರಿರುತ್ತಾರೆ ಅದರ ನೀತಿ ನಿಯಮಗಳನ್ನು ಪ್ರತಿ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಉದ್ದೇಶಗಳಿಗಾಗಿ ಅಧಿಸೂಚನೆ ಗಳಿಂದ ನಿರ್ಧಿಷ್ಟಪಡಿಸಿದೆ. (ಬಿ) ರಾಜ್ಯ ಸರ್ಕಾರಗಳು ಅಧಿಸೂಚನೆಗಳಿಂದ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣೀಕರಣ ಸಮಿತಿಗಳನ್ನು ರಚಿಸಬಹುದು ಇದರಲ್ಲಿ ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡುವ ಸದಸ್ಯರಿರುತ್ತಾರೆ ನಿಯಮಗಳನ್ನು ಈ ವಿಭಾಗದಲ್ಲಿ ಉದ್ದೇಶಗಳ ಅಧಿಸೂಚನೆಯಲ್ಲಿ ನಿರ್ಧಿಷ್ಟಪಡಿಸಲಾಗಿದೆ. 5. ಅರ್ಜಿಯನ್ನು ಜಂಟಿಯಾಗಿ, ನಿರ್ಧಿಷ್ಟಪಡಿಸಿದ ರೀತಿಯಲ್ಲಿ ಮತ್ತು ನಮೂನೆಯಲ್ಲಿ ದಾನಿಯಿಂದ ಮತ್ತು ಪಡೆದುಕೊಳ್ಳುವವರಿಂದ ಮಾಡಬೇಕು, ಪ್ರಮಾಣೀಕರಣ ಸಮಿತಿಯು ವಿಚಾರಣೆ ಮಾಡಿದ ನಂತರ ಮತ್ತು ಅರ್ಜಿಯು ಈ ಕಾಯಿದೆಯ ಅಗತ್ಯಗಳಿಗನುಗುಣವಾಗಿದೆಯಂದು ತಾನು ಸಂತುಷ್ಟವಾದಲ್ಲಿ ಅರ್ಜಿಗೆ ಅನುಮೋದನೆ ನೀಡುತ್ತದೆ ಇದರಿಂದ ಮಾನವ ಅಂಗಾಂಗಗಳನ್ನು ತೆಗೆಯುವುದು ಅಥವಾ ಕಸಿ ಮಾಡುವುದಕ್ಕೆ ಸಾಧ್ಯವಾಗುತ್ತದೆ. (6) ವಿಚಾರಣೆಯ ನಂತರ ಮತ್ತು ಅರ್ಜಿದಾರರಿಗೆ ಅವಕಾಶವನ್ನು ಕೇಳಿದ ನಂತರ ಪ್ರಮಾಣೀಕರಣ ಸಮಿತಿಗೆ ಅರ್ಜಿದಾರರು ಈ ಕಾಯಿದೆ ಮತ್ತು ನಿಯಮಗಳ ಅಗತ್ಯಗಳನ್ನು ಪೂರೈಸುವುದಿಲ್ಲವೆಂದು ಕಂಡುಬಂದಲ್ಲಿ ಅದರ ಕಾರಣಗಳನ್ನು ಲಖಿತವಾಗಿ ದಾಖಲಿಸಬೇಕು ಮ ತ್ತು ಅರ್ಜಿಯ ಅನುಮೋದನೆಯನ್ನು ತಿರಸ್ಕರಿಸಬಹುದು.

ಅಧ್ಯಾಯ III ಆಸ್ಪತ್ರೆಗಳ ನಿಯಂತ್ರಣ
10. ಮಾನವ ಅಂಗಾಂಗಗಳನ್ನು ತೆಗೆಯುವ, ಸಂರಕ್ಷಿಸುವ ಅಥವಾ ಕಸಿ ಮಾಡುವ ಆಸ್ಪತ್ರೆಗಳ ನಿಯಂತ್ರಣ.

(1) ಈ ಕಾಯಿದೆಯಲ್ಲಿ ಮತ್ತು ಪ್ರಾರಂಭದಲ್ಲಿ: (ಎ) ಈ ಕಾಯಿದೆಯಡಿಯಲ್ಲಿ ನೋಂದಾಯಿಸಿಕೊಳ್ಳದ ಯಾವುದೇ ಆಸ್ಪತ್ರೆಯು, ಮಾನವ ಅಂಗಾಂಗಗಳನ್ನು ತೆಗೆಯುವ,ಸಂಗ್ರಹಿಸುವ ಅಥವಾ ಕಸಿ ಮಾಡುವ ಅಥವಾ ಅಂತಹ ಚಟುವಟಿಕೆಗಳೊಂದಿಗೆ ಸಹಭಾಗಿಯಾಗುವ, ಅಥವಾ ಸಹಾಯ ಮಾಡುವುದನ್ನು ನಿರ್ಬಂಧಿಸಿದೆ. (ಬಿ) ಈ ಕಾಯಿದೆ ಅಡಿಯಲ್ಲಿ ನೋಂದಾಯಿಸಿಕೊಳ್ಳದ ಯಾವುದೇ ಮೆಡಿಕಲ್ ಪ್ರಾಕ್ಟೀಷನರ್ ಅಥವಾ ಬೇರೆ ಯಾವುದೇ ಸ್ಥಳ, ವ್ಯಕ್ತಿಯು ತನ್ನ ಅಂಗಾಂಗಗಳನ್ನಾಗಲೀ ಬೇರೆ ವ್ಯಕ್ತಿಯ ಅಂಗಾಂಗಗಳನ್ನಾಗಲೀ ತೆಗೆಯುವುದು ಅಥವ ತೆಗೆಯಲು ಸಹಾಯ ಮಾಡುವುದು, ಸಂಗ್ರಹಣೆ ಮಾಡುವುದು ಅಥವಾ ಕಸಿ ಮಾಡುವುದಕ್ಕೆ ಯಾವುದೇ ವ್ಯಕ್ತಿಗೆ ಮಾಡಲು , ಮಾಡಲು ಸಹಾಯ ಮಾಡುವುದು ಕಾನೂನು ಬಾಹಿರವಾಗುತ್ತದೆ. ಮತ್ತು (ಸಿ) ಸೆಕ್ಷನ್ 15 ರ ಸಬ್ ಸೆಕ್ಷನ್ (1) ರ ಅಡಿಯಲ್ಲಿ ನೋಂದಾಯಿಸಿಕೊಳ್ಳದ ಆಸ್ಪತ್ರೆಯನ್ನು ಒಳಗೊಂಡಂತೆ ಯಾವುದೇ ಸ್ಥಳಗಳನ್ನು ಯಾವುದೇ ವ್ಯಕ್ತಿಯ ಅಂಗಾಂಗಗಳನ್ನು ತೆಗೆಯಲು, ಸಂಗ್ರಹಿಸಲು, ಅಥವಾ ಕಸಿ ಮಾಡಲು ವೈದ್ಯಕೀಯ ಉದ್ದೇಶಕ್ಕಲ್ಲದೆ ಬೇರೆ ಕಾರಣಕ್ಕೆ ಉಪಯೋಗಿಸಿಕೊಳ್ಳತಕ್ಕದ್ದಲ್ಲ (2) ಸಬ್-ಸೆಕ್ಷನ್(1) ರಡಿಯಲ್ಲಿರುವಂತೆ ಯಾವುದೇ ತಾಳಿಕೆಗಳು ಕಣ್ಣುಗಳು,ಅಥವಾ ಕಿವಿಗಳನ್ನು ದಾನಿ ದೇಹದಿಂದ ಯಾವುದೇ ಸ್ಥಳದಿಂದಲೂ ವೈದ್ಯಕೀಯ ಉದ್ದೇಶಕ್ಕಾಗಿ ನೋಂದಾಯಿತ ಮಡಿಕಲ್ ಪ್ರಾಕ್ಟೀಷನರ್ ತೆಗೆಯಬಹುದಾಗಿದೆ. ವಿವರಣೆಗಳು: ಈ ಸಬ್ ಸೆಕ್ಷನ್ ನ ಉದ್ದೇಶಕ್ಕಾಗಿ “ ಕಿವಿಗಳು” ಎಂದರೆ ಅದರಲ್ಲಿ ಕಿವಿಯ ಡ್ರಮ್ ಗಳು ಮತ್ತು ಕಿವಿಯ ಮೂಳೆಗಳು ಸೇರಿರುತ್ತವೆ.

11.ಮಾನವ ಅಂಗಾಂಗಗಳನ್ನು ವೈದ್ಯಕೀಯ ಉದ್ದೇಶವನ್ನು ಹೊರತು ಪಡಿಸಿ ಬೇರೆ ಉದ್ದೇಶಗಳಿಗಾಗಿ ತೆಗೆಯುವುದು ಅಥವಾ ಕಸಿ ಮಾಡುವುದರ ನಿಷೇಧ.

ಯಾವುದೇ ದಾನಿಗೆ ಮತ್ತು ವ್ಯಕ್ತಿಗೆ ಯಾವುದೇ ಮಾನವ ಅಂಗಾಂಗಗಳನ್ನು ವೈದ್ಯಕೀಯ ಉದ್ದೇಶಗಳಿಗಲ್ಲದೆ ಬೇರೆಯ ಉದ್ದೇಶಗಳಿಗಾಗಿ ತೆಗೆಯಲು ಅಧಿಕಾರ ನೀಡಲಾಗಿಲ್ಲ

12.ವಿವರಣೆಗಳು ಪರಿಣಾಮಗಳು ಇತ್ಯಾದಿಗಳನ್ನು ದಾನಿಗೆ ಮತ್ತು ಸ್ವೀಕರಿಸುವವರಿಗೆ.

ಯಾವುದೇ ನೋಂದಾಯಿತ ಮೆಡಿಕಲ್ ಪ್ರಾಕ್ಟೀಷನರ್/ವೈದ್ಯರು ಯಾವುದೇ ವ್ಯಕ್ತಿಯ ಮಾನವ ಅಂಗಾಂಗಗಳನ್ನು ತೆಗೆಯುವ ಮುನ್ನ ಅವನಿಗೆ ಅದರ ಪರಿಣಾಮಗಳು,ತೊಂದರೆಗಳು ಮತ್ತು ಅಪಾಯಗಳನ್ನು ದಾನಿಗೆ ಮತ್ತು ಪಡೆದುಕೊಳ್ಳುವವರಿಗೆ ಕ್ರಮವಾಗಿ ವಿವರಿಸದ ಹೊರತು ತೆಗೆಯುವಂತಿಲ್ಲ