ಮಾನವ ಅಂಗಾಂಗ ಕಸಿ ಕಾಯಿದೆ


ಅಧ್ಯಾಯ II
3.ಮಾನವ ಅಂಗಾಂಗಗಳನ್ನು ತೆಗೆಯುವ ಪ್ರಾಧಿಕಾರ

(1). ಯಾವುದೇ ದಾನಿಯು ನಿರ್ಧಿಷ್ಟಪಡಿಸಿದ ಸ್ಥಿತಿಗೆ ಅನುಗುಣವಾಗಿ ಅವನ ಸಾವಿಗೆ ಮುಂಚಿತವಾಗಿ ಅವನ ದೇಹದ ಯಾವುದೇ ಅಂಗಾಂಗವನ್ನು ವೈದ್ಯಕೀಯ ಉದ್ದೇಶಕ್ಕಾಗಿ ತೆಗೆಯಲು ಅಧಿಕಾರ ನೀಡುವುದು. (2). ಯಾವುದೇ ದಾನಿಯು ಲಿಖಿತವಾಗಿ ಮತ್ತು ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಸಾಕ್ಷಿಗಳ ಸಮ್ಮುಖದಲ್ಲಿ( ಕನಿಷ್ಟ ಒಬ್ಬರು ಇಂತಹ ವ್ಯಕ್ತಿಯ ಹತ್ತಿರದ ಸಂಬಂಧಿಯಾಗಿರಬೇಕು), ಸ್ಪಷ್ಟವಾಗಿ ಅವನ ಸಾವಿಗೆ ಮುಂಚಿತವಾಗಿ ಅಥವಾ ಸಾವಿನ ನಂತರ ವೈದ್ಯಕೀಯ ಉದ್ದೇಶಕ್ಕಾಗಿ ಯಾವುದೇ ಸಂಧರ್ಬದಲ್ಲಿ ತನ್ನ ದೇಹದ ಯಾವುದೇ ಮಾನವ ಅಂಗಾಂಗವನ್ನು ತೆಗೆದುಕೊಳ್ಳಲು ಕಾನೂನು ಬದ್ದವಾಗಿ ಮೃತ ದೇಹವನ್ನು ಹೊಂದಿರುವವರು ನೀಡಿರುವ ದಾನವಾಗಿರುತ್ತದೆ. ದಾನಿಯು ತರುವಾಯ ರದ್ದುಪಡಿಸಿದ ಹೊರತು ಮೇಲ್ಕಾಣಿಸಿದ ಯಾವುದೇ ಕಾರಣವನ್ನು ಹೊಂದಿದ್ದಾನೆಂದು ಕಂಡುಬರದೆ ನೋಂದಾಯಿತ ವೈದ್ಯಕೀಯ ವೃತ್ತಿಪರರು ವೈದ್ಯಕೀಯ ಉದ್ದೇಶಕ್ಕಾಗಿ ಆ ಮಾನವ ಅಂಗವನ್ನು ದಾನಿಯ ಮೃತ ದೇಹದಿಂದ ತೆಗೆಯಬಹುದಾಗಿದೆ. (3). ಸಬ್-ಸೆಕ್ಷನ್ (2)ರ ಅಡಿಯಲ್ಲಿ ಇಂತಹ ಅಧಿಕಾರದಉಲ್ಲೇಖವನ್ನು ಯಾವುದೇ ವ್ಯಕ್ತಿಯು ತನ್ನ ಸಾವಿಗೆ ಮುಂಚೆ ಮಾಡದೇ ಇದ್ದಲ್ಲಿ ಆದರೆ ತನ್ನ ಮರಣದ ನಂತರ ವ್ಯಕ್ತಿಯು ಯಾವುದೇ ಇಂತಹ ಮಾನವ ಅಂಗಾಂಗಗಳನ್ನು ವೈದ್ಯಕೀಯ ಉದ್ದೇಶಗಳಿಗಾಗಿ ಬಳಸಬಹುದೆಂದು ಹೇಳಿದ್ದಲ್ಲಿ, ವ್ಯಕ್ತಿಯು ಕಾನೂನು ಬದ್ದವಾಗಿ ಮೃತ ದೇಹವನ್ನು ಹೊಂದಿದ್ದಲ್ಲಿ ಮೃತ ವ್ಯಕ್ತಿಯ ಹತ್ತಿರದ ಸಂಬಂಧಿಯು ಮೃತ ವ್ಯಕ್ತಿಯ ಮಾನವ ಅಂಗಾಂಗಗಳನ್ನು ವೈದ್ಯಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಯಾವುದೇ ಅಡ್ಡಿಯನ್ನುಂಟು ಮಾಡದಿದ್ದಲ್ಲಿ, ಮೃತ ವ್ಯಕ್ತಿಯ ಮಾನವ ಅಂಗಾಂಗಗಳನ್ನು ತೆಗೆಯಲು ಅಧಿಕಾರ ಹೊಂದಿದ್ದಲ್ಲಿ (4) ಸಬ್ ಸೆಕ್ಷನ್(1) ಅಥವಾ ಸಬ್-ಸೆಕ್ಷನ್(2) ಅಥವಾ ಪ್ರಕರಣವಿದ್ದಂತೆ ಅಧಿಕಾರ ನೀಡಲಾಗಿರುತ್ತದೆ, ಸಬ್ –ಸೆಕ್ಷನ್(3) ವೈದ್ಯಕೀಯ ಉದ್ದೇಶಕ್ಕಾಗಿ ಮಾನವ ಅಂಗಾಂಗಗಳನ್ನು ತೆಗೆಯಲು ಸಾಕಷ್ಟು ಸಮರ್ಥನೆಯಾಗಿರುತ್ತದೆ: ಆದರೆ ನೋಂದಾಯಿತ ವೈದ್ಯಕೀಯ ವೃತ್ತಿಪರರನ್ನು ಹೊರತುಪಡಿಸಿ ಬೇರೆಯವರು ಇಂತಹ ತೆಗೆಯುವಿಕೆಯನ್ನು ಮಾಡುವಂತಿಲ್ಲ. (5) ಮೃತ ವ್ಯಕ್ತಿಯ ದೇಹದಿಂದ ಯಾವುದೇ ಮಾನವ ಅಂಗಾಂಗಗಳನ್ನು ತೆಗೆಯುವ ಮುಂಚಿತವಾಗಿ ದೇಹದ ವೈಯಕ್ತಿಕ ಪರೀಕ್ಷೆ ಮಾಡಿದ ನಂತರ, ಆ ದೇಹದ ಮೆದುಳು ಸತ್ತಿರುವುದು ಖಚಿತಗೊಂಡು ಇಂತಹ ಸಾವನ್ನು ಸಬ್ ಸೆಕ್ಷನ್(6)ರ ಅಡಿಯಲ್ಲಿ ದೃಢೀಕರಣಗೊಂಡು, ಅದು ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಷನರ್ ಗೆ ಸಂತೃಪ್ತಿಯೆನಿಸಿರಬೇಕು. (6) ಯಾವುದೇ ಮಾನವ ದೇಹದ ಅಂಗಾಂಗಗಳನ್ನು ಅವನ ಮೆದುಳು ಸತ್ತಿರುವ ಸಂಧರ್ಭದಲ್ಲಿ ತೆಗೆಯ ಬಹುದಾಗಿದೆ, ಇಂತಹ ಸಾವನ್ನು ದೃಢೀಕರಿಸದ ಹೊರತು ಯಾವುದೇ ಅಂಗಾಂಗಗಳನ್ನು ತೆಗೆಯತಕ್ಕದ್ದಲ್ಲ, ಇಂತಹ ಸ್ಥಿತಿಯಲ್ಲಿ ಮತ್ತು ಇಂತಹ ನಿರ್ಧಿಷ್ಟ ಸ್ಥಿತಿಯ ಅಗತ್ಯಗಳನ್ನು ವೈದ್ಯಕೀಯ ಪರಿಣಿತ ಮಂಡಳಿಯು ಖಚಿತ ಪಡಿಸಿ ಅವು ಈ ಕೆಳಕಂಡಂತೆ ಸಂತೃಪ್ತಿ ತರುವಂತಿದ್ದಲ್ಲಿ ಮಾತ್ರವೇ ಅವುಗಳೆಂದರೆ: (i). ಮೆದುಳು ಸಾವು ಸಂಭವಿಸಿರುವ ಆಸ್ಪತ್ರೆಯ ಕಾರ್ಯನಿರ್ವಹಣೆಯಲ್ಲಿರುವ ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಷನರ್; (ii) ಒಬ್ಬ ಪರಿಣಿತ ವೈದ್ಯ(ಸ್ಪೆಷಿಲಿಸ್ಟ್)ರಾಗಿದ್ದು ನೋಂದಾಯಿತ ವೈದ್ಯಕೀಯ ವೃತ್ತಿ ಮಾಡುವರಾಗಿರಬೇಕು, ಅವರನ್ನು ಕ್ಲಾಸ್(i) ರಲ್ಲಿ ನಿರ್ಧಿಷ್ಟ ಪಡಿಸಿದಂತೆ ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಷನರ್ ಎಂದು ಸೂಕ್ತ ಪ್ರಾಧಿಕಾರದ ತಂಡದಿಂದ ನೇಮಕಗೊಂಡಿರಬೇಕು. (iii) ಕ್ಲಾಸ್ (i)ರಲ್ಲಿ ನಿರ್ಧಿಷ್ಟಪಡಿಸಿರುವಂತೆ ಸೂಕ್ತ ಪ್ರಾಧಿಕಾರದ ತಂಡದಿಂದ ಅನುಮೋದನೆ ಪಡೆದ ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಷನರ್ ರಿಂದ ನಾಮ ನಿರ್ದೇಶನಗೊಂಡ ನ್ಯೂರೋಲಾಜಿಸ್ಟ್ ನರರೋಗ ತಜ್ಞರು ಅಥವ ನರ ಶಸ್ತ್ರ ಚಿಕಿತ್ಸಾ ತಜ್ಞರು ಮತ್ತು (iv) ಮೆದುಳು ಸತ್ತಿರುವ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವ ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಷನರ್. 7. ಸಬ್-ಸೆಕ್ಷನ್(3)ರಡಿಯಲ್ಲಿರುವಂತೆ ಯಾವುದಕ್ಕೂ ವಿರುದ್ಧವಲ್ಲದ ಹದಿನೆಂಟು ವರ್ಷಕ್ಕಿಂತ ಕಡಿಮೆ ಇರುವ ವ್ಯಕ್ತಿಯ ಮೆದುಳು ಸತ್ತಿರುವುದು ನಡೆದಿದ್ದಲ್ಲಿ ಮತ್ತು ಅದನ್ನು ಸಬ್-ಸೆಕ್ಷನ್(6)ರಡಿಯಲ್ಲಿ ದೃಢೀಕರಿಸಲ್ಪಟ್ಟಿದ್ದರೆ, ಮೃತ ವ್ಯಕ್ತಿಯ ಪೋಷಕರು ಮೃತ ವ್ಯಕ್ತಿಯ ದೇಹದಿಂದ ಯಾವುದೇ ಅಂಗಾಂಗಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ನೀಡಬಹುದು.

4.ಕೆಲವು ಪ್ರಕರಣಗಳಲ್ಲಿ ಮೃತ ವ್ಯಕ್ತಿಯ ಅಂಗಾಂಗಳನ್ನು ತೆಗೆದುಕೊಳ್ಳಲು ಯಾವುದೇ ಅಧಿಕಾರವನ್ನು ನೀಡಬೇಕಾಗಿರುವುದಿಲ್ಲ.

ಸೆಕ್ಷನ್ 3ರ ಸಬ್ ಸೆಕ್ಷನ್(2)ರ ಅಡಿಯಲ್ಲಿ ಮೃತ ವ್ಯಕ್ತಿಗೆ ಇಂತಹ ಯಾವುದೇ ಅನುಕೂಲತೆಗಳು ಬೇಕಾಗಿದ್ದಲ್ಲಿ ದೇಹದಿಂದ ಮಾನವ ಅಂಗಾಂಗಗಳನ್ನು ತೆಗೆಯಲು ಯಾವುದೇ ಅನೂಕೂಲತೆಗಳನ್ನು ನೀಡಲಾಗುವುದಿಲ್ಲ ಇಂತಹ ಅನುಕೂಲತೆಗಳನ್ನು ಪಡೆದುಕೊಳ್ಳಬೇಕಾದಲ್ಲಿ ಇಂತಹ ವ್ಯಕ್ತಿಯು ಮೃತ ವ್ಯಕ್ತಿಗೆ ಸಂಬಂಧಿಸಿದಂತೆ ಅವರಿಗಿರುವ ಸಂಬಂಧವನ್ನು ಪಂಚನಾಮೆಯಲ್ಲಿ ಆ ಮೃತ ದೇಹವನ್ನು ಹೊಂದಲು ಕಾನೂನಿನ ಪ್ರಕಾರ ತಾತ್ಕಾಲಿಕವಾಗಿ ಅವರು ಅಧಿಕೃತ ವ್ಯಕ್ತಿಯೆಂದು ತಿಳಿಸಿರಬೇಕು (2) ಶವವನ್ನು ದಫನು ಮಾಡಲು, ಶವ ಸಂಸ್ಕಾರ ಮಾಡಲು ಅಥವಾ ವಿಲೇವಾರಿ ಮಾಡಲು ಯಾವುದೇ ವ್ಯಕ್ತಿಗೆ ಸಂಪೂರ್ಣವಾಗಿ ಶವವನ್ನು ನೀಡಿದ್ದಾಗ ಅಂತಹ ವ್ಯಕ್ತಿಯು ಮೃತ ವ್ಯಕ್ತಿಯ ದೇಹದ ಯಾವುದೇ ಅಂಗಾಂಗಗಳನ್ನು ತೆಗೆಯುವುದನ್ನು ನಿರ್ಭಂಧಿಸಿದೆ.