ಜೀವ ಸಾರ್ಥಕತೆಯ ಬಗ್ಗೆ


ಜೀವಸಾರ್ಥಕತೆಯನ್ನು ಕರ್ನಾಟಕ ರಾಜ್ಯದಲ್ಲಿ ಅಂಗ ಕಸಿ ಕಾರ್ಯಕ್ರಮಕ್ಕಾಗಿ, ಕರ್ನಾಟಕ ರಾಜ್ಯ ಸರ್ಕಾರವು ಸಾವನ್ನಪ್ಪಿರುವ ದಾನಿ(ಶವ)ಗಾಗಿ ರಚಿಸಿದೆ. ಜೀವಸಾರ್ಥಕತೆಯು ಒಂದು ಸಂಸ್ಥೆಯಾಗಿದ್ದು 1994 ರ ಮಾನವ ಅಂಗಾಂಶ ಕಸಿಯ ಕಾಯಿದೆಯ ಅನುಷ್ಟಾನವನ್ನು ಮೇಲ್ವಿಚಾರಣೆ ಮಾಡಲು ನೇಮಿಸಲಾಗಿದೆ. ಈ ಸಂಸ್ಥೆಯ ಗುರಿಯೆಂದರೆ ನಿಧನಹೊಂದಿರುವ ದಾನಿಯ ಅಂಗ ಕಸಿಗೆ ಸಮನ್ವಯತೆಯನ್ನು ಸಾಧಿಸುವುದು ಮತ್ತು ಸಾರ್ವಜನಿಕರನ್ನು ಅಂಗಾಂಗ ದಾನಕ್ಕಾಗಿ ಸುಶಿಕ್ಷಿತರನ್ನಾಗಿ ಮಾಡುವುದು.

ಜೀವಸಾರ್ಥಕತೆಯ ಕೆಲಸಗಳೆಂದರೆ, ನಿಧನ ಹೊಂದಿರುವ ದಾನಿಯು (ಶವ) ಸಕ್ರಿಯವಾಗಿ ಭಾಗಿಯಾಗಲು ಆಸ್ಪತ್ರೆಗಳನ್ನು ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮದ ಮೂಲಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಮಾಡುವುದು. ಸಾರ್ವಜನಿಕ ತಿಳುವಳಿಕೆಯ ಕಾರ್ಯಕ್ರಮಗಳು ಆಸ್ಪತ್ರೆಗಳು,ಶೈಕ್ಷಣಿಕ ಸಂಸ್ಥೆಗಳು ಮತ್ತು ಕಾರ್ಪೋರೇಟ್ ಮತ್ತು ಸರ್ಕಾರೇತರ ಸಂಸ್ಥೆಗಳ ಜೊತೆಗೆ ಮಾಧ್ಯಮದ ಭಾಗವಹಿಸುವಿಕೆಯ ಮೂಲಕ ನಡೆಯುತ್ತವೆ.

ಜೀವಸಾರ್ಥಕತೆಯು ಸುಸ್ಥಿರವಾದ ಶವದ ಕಸಿಯ ಕಾರ್ಯಕ್ರಮವನ್ನು ಸಾಧಿಸಲು ಆಸ್ಪತ್ರೆಗಳ ತಂಡದ ಭಾಗವಹಿಸುವಿಕೆಯೊಂದಿಗೆ ಕೆಲಸ ಮಾಡುತ್ತಿದೆ. ಜೀವಸಾರ್ಥಕತೆಯು ಸಂಪೂರ್ಣವಾಗಿ ಕರ್ನಾಟಕ ರಾಜ್ಯ ಅಂಗ ಮತ್ತು ಅಂಗಾಂಶಗಳ ಹಂಚಿಕೆ ವ್ಯವಸ್ಥೆಯ ಜವಾಬ್ದಾರಿಯನ್ನು ಹೊಂದಿದೆ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಸಂಸ್ಥೆಗೆ ಇತರೆ ಚಟುವಟಿಕೆಗಳನ್ನು ನಿಭಾಯಿಸುವ ಜವಾಬ್ದಾರಿಯನ್ನು ಕೊಟ್ಟಿದೆ.