ಆಗಾಗ್ಗೆ ಕೇಳಲ್ಪಡುವ ಪ್ರಶ್ನೆಗಳು


ಮರಣದ ನಂತರ ದಾನಕ್ಕೆ ಇರುವ ಹಂತಗಳೇನು?
ರೋಗಿಯನ್ನೊಮ್ಮೆ ದಾಖಲಿಸಿದರೆ; ರೋಗಿಯನ್ನು ಸ್ಥಿರಗೊಳಿಸಲು ಎಲ್ಲಾ ಪ್ರಯತ್ನಗಳ ಮಾಡಲಾಗುತ್ತದೆ. ಎಲ್ಲಾ ಪ್ರಯತ್ನಗಳು ವಿಫಲವಾದರೆ, ಎಲ್ಲಾ ರೀತಿಯ ಮೌಲ್ಯಮಾಪನಗಳು,ಪರೀಕ್ಷೆಗಳು ಮತ್ತು ದಾಖಲಾತಿಗಳ ಪರೀಕ್ಷೆಯ ನಂತರ ರೋಗಿಯು ಮೆದುಳು ಸಾವನ್ನಪ್ಪಿದ್ದಾರೆಂದು ಘೋಷಿಸಲ್ಪಡುತ್ತಾನೆ. ಕುಟುಂಬದವರಿಂದ ಒಪ್ಪಿಗೆ ಪಡೆದುಕೊಂಡ ನಂತರ ದಾನ ಮಾಡುವಿಕೆ ಮತ್ತು ಅಂಗಾಂಗಳನ್ನು ಸಂರಕ್ಷಣೆಗಾಗಿ ಅಂಗಾಂಗ ಸಂರಕ್ಷಣಾ ಸಂಘಟನೆಗೆ(ಓಪಿಓ) ಮಾಹಿತಿ ನೀಡಲಾಗುತ್ತದೆ. ಕೊರೋನರ್/ ಕಾನೂನಾತ್ಮಕ ಪ್ರಾಧಿಕಾರಗಳಿಂದ ಒಪ್ಪಿಗೆ ಪಡೆದುಕೊಳ್ಳಲಾಗುತ್ತದೆ. ಅದೇ ಸಮಯದಲ್ಲಿ ಅಂಗಾಂಗ ದಾನಿಯನ್ನು ದ್ರಾವಣಗಳಿಂದ ಸ್ಥರೀಕರಿಸಿ, ಔಷಧೋಪಚಾರ ಮತ್ತು ಅನೇಕ ರೀತಿಯ ಪ್ರಯೋಗಾಲಯ ಪರೀಕ್ಷೆಗಳು ಮತ್ತು ಕೃತಕ ಉಸಿರಾಟದಲ್ಲಿರಿಸಲಾಗಿರುತ್ತದೆ. ಅಂಗಾಂಗ ಕಸಿಗಾಗಿ ಪಡೆದುಕೊಳ್ಳುವವರನ್ನು ಗುರುತಿಸಲಾಗುತ್ತದೆ. ಶಸ್ತ್ರಚಿಕಿತ್ಸಾ ತಂಡವನ್ನು ಬಳಸಿಕೊಳ್ಳಲಾಗುತ್ತದೆ ಮತ್ತು ಅಂಗಾಂಗಗಳನ್ನು ಮತ್ತು ಅಂಗಾಂಶಗಳನ್ನು ತೆಗೆಯಲು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಲಾಗುತ್ತದೆ. ದಾನಿಯನ್ನು ಶಸ್ತ್ರ ಚಿಕಿತ್ಸಾ ಕೊಠಡಿಗೆ ತರಲಾಗುತ್ತದೆ. ವಿವಿಧ ಅಂಗಾಂಗಗಳ ಪುನಶ್ಚೇತನ ಕ್ರಿಯೆಯನ್ನು ಮಾಡಲಾಗುತ್ತದೆ ಅಲ್ಲದೆ ಅಂಗಾಂಗಗಳನ್ನು ವಿಶೇಷ ದ್ರಾವಣಗಳು ಮತ್ತು ಶೈತ್ಯಗಾರಗಳಿಂದ ಸಂರಕ್ಷಿಸಲಾಗುತ್ತದೆ. ಕೃತಕ ಉಸಿರಾಟದ ವ್ಯವಸ್ಥೆಯನ್ನು ತಪ್ಪಿಸಲಾಗುತ್ತದೆ. ದಾನಿಯ ದೇಹವನ್ನು ವೈದ್ಯಕೀಯವಾಗಿ ಮುಚ್ಚಿ ಬಿಡುಗಡೆ ಮಾಡಲಾಗುತ್ತದೆ.

‘ಪ್ರತಿ ಕೆಲವು ತಿಂಗಳುಗಳಿಗೊಮ್ಮೆ ಮೂತ್ರಕೋಶದ ಮಾರಾಟದ ಬಗ್ಗೆ ಕೇಳುತ್ತಿರುತ್ತೇವೆ ಏಕೆ? ವೈದ್ಯರು ದುರಾಸೆಯವರಾಗಿರುವುದರಿಂಲೇ?
ಸಾರ್ವಜನಿಕರಿಗೆ ಮಾಹಿತಿಯ ಕೊರತೆಯಿರುವ ಕಾರಣದಿಂದಾಗಿ ಭಾರತದಲ್ಲಿ ಶವಗಳಿಂದ ಅಂಗಾಂಗ ದಾನವು ಇನ್ನೂ ಶೈಶವಾವಸ್ಥೆಯಲ್ಲಿಯೇ ಇದೆ, ಇಲ್ಲಿ ಅಂಗಾಂಗ ದಾನಗಳನ್ನು ಜೀವಂತ ದಾನಿಗಳಿಂದಲೇ ಪಡೆದು ಕಸಿ ಮಾಡಲಾಗುತ್ತಿದೆ. ಆದರೂ ಸೂಕ್ತವೆನಿಸುವ ದಾನಿಯು ಸಿಗದೇ ಇರುವಂತಹ ಅನೇಕ ರೋಗಿಗಳ ಸಂಖ್ಯೆಯೂ ಬಹಳಷ್ಟು ದೊಡ್ಡದಿದೆ ಆದ್ದರಿಂದ ವಾಣಿಜ್ಯಿಕ ದಾನಿಗಳನ್ನು ನೋಡಲಾಗುತ್ತಿದೆ. ಇಂತಹ ಎಲ್ಲಾ ದಾನಗಳನ್ನೂ ವಿರೋಧಿಸಲಾಗುತ್ತಿದೆ. ಆದರೆ ಜೀವ್ಮರಣದ ಸ್ಥಿತಿಯಲ್ಲಿರುವ ರೋಗಿಗಳು ವೈದ್ಯರನ್ನು ಮತ್ತು ಪ್ರಾಧಿಕಾರ ಸಮಿತಿಗೆ ಮನವರಿಕೆ ಮಾಡಿ ಹೇಗೋ ನಿರ್ವಹಿಸುತ್ತಿದ್ದಾರೆ. ಸಾಂಧರ್ಭಿಕವಾಗಿ ವೈದ್ಯರು ಜೀವವನ್ನು ಉಳಿಸುವ ಸಲುವಾಗಿ ಕುರುಡಾಗುತ್ತಾರೆ. ಆದಾಗ್ಯೂ ಈ ‘ ಮೂತ್ರಕೋಶ/ಕಿಡ್ನಿ ಯ ಕಾನೂನು ಬಾಹಿರ ಉದ್ಯಮ’ ಕ್ಕೆ ಧೀರ್ಘಕಾಲೀನ ಪರಿಹಾರವೆಂದರೆ ಕಾರ್ಯಸಾಧ್ಯವೆನಿಸುವ ಶವದಿಂದ ಅಂಗಾಂಗಗಳನ್ನು ಕಸಿ ಮಾಡುವ ಕಾರ್ಯಕ್ರಮವಾಗಿದೆ.

ಮೂತ್ರಕೋಶ/ಕಿಡ್ನಿ ವೈಫಲ್ಯವನ್ನು ತಡೆಯುವುದು ಹೇಗೆ?
ಮುಂಜಾಗ್ರತೆಯು ಗುಣಪಡಿಸುವುದಕ್ಕಿಂತಲೂ ಉತ್ತಮವಾದದ್ದು ಇಎಸ್ಆರ್ ಡಿ ಚಿಕಿತ್ಸೆಗೆ ತಗಲುವ ಖರ್ಚುಗಳು ಹೆಚ್ಚು.
ಸಾಮಾನ್ಯ ಮಾನದಂಡಗಳು
ನಿಮ್ಮ ಸ್ಥಿತಿ ಯಾವುದೇ ಆಗಿದ್ದರೂ ಸಹ ಈ ಕೆಳಗಿನವುಗಳು ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಕೆಲವು ಸಲಹೆಗಳು.
1. ಆರೋಗ್ಯಯುತ ಆಹಾರವನ್ನು ತಿನ್ನಿರಿ.
2. ತಾಜಾ ಇರುವ ಮತ್ತು ಉಪ್ಪು ಕಡಿಮೆ ಇರುವಂತಹ ಆಹಾರವನ್ನು ತೆಗೆದುಕೊಳ್ಳಿ, ಕೊಬ್ಬಿನಂಶವಿರುವ, ಸಂಸ್ಕರಿಸಿದ ಆಹಾರವನ್ನು ತೆಗೆದುಕೊಳ್ಳಬೇಡಿ.
3. ಧೂಮಪಾನ ಮಾಡುವುದನ್ನು ಬಿಟ್ಟುಬಿಡಿ
4. ನಿಯಮಿತವಾಗಿ ವ್ಯಾಯಾಮ ಮಾಡಿ
5. ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ
6. ಒತ್ತಡ ಮತ್ತು ಶ್ರಮವನ್ನು ಕಡಿಮೆ ಮಾಡಿಕೊಳ್ಳಿ.

ಅಂಗಾಂಗ ದಾನಕ್ಕಾಗಿ ನೀವು ಯಾರನ್ನು ಸಂಪರ್ಕಿಸಬೇಕು?
ಕರ್ನಾಟಕದಲ್ಲಿ ಅಂಗಾಂಗ ದಾನ ಮತ್ತು ಅಂಗಾಂಗ ಕಸಿಯನ್ನು ಸಮನ್ವಯಗೊಳಿಸುತ್ತಿರುವ ಏಕೈಕ ಸಂಸ್ಥೆಯೆಂದರೆ ಅದು ಜೀವಸಾರ್ಥಕತೆ. ಜೀವಸಾರ್ಥಕತೆಯು ರಾಜ್ಯ ಸರ್ಕಾರದಿಂದ ನಿರ್ವಹಿಸಲ್ಪಡುತ್ತಿರುವ ಸಂಸ್ಥೆಯಾಗಿದ್ದು ಶವಗಳ ಅಂಗಾಂಗ ಕಸಿ ಮತ್ತು ಅದರ ಸಮನ್ವಯಕ್ಕಾಗಿ ಸರ್ಕಾರದಿಂದ ಕೇಂದ್ರೀಕೃತವಾಗಿ ಕೆಲಸ ಮಾಡುತ್ತಿದೆ. ಅಂಗಾಂಗ ಕಸಿಗಾಗಿ ಕಾಯುತ್ತಿರುವವರ ಒಂದು ಪಟ್ಟಿಯನ್ನು ನಿರ್ವಹಿಸಲಾಗುತ್ತಿದೆ. ಸಮರ್ಥ ದಾನಿಯ ಬಗ್ಗೆ ಮಾಹಿತಿ ಪಡೆದುಕೊಂಡ ನಂತರ ಜೀವಸಾರ್ಥಕತೆಯು ದಾನಕ್ಕೆ ಲಭ್ಯವಿರುವ ಅಂಗಾಂಗದ ಸೂಕ್ತತೆಯನ್ನು ಅವಲೋಕಿಸುತ್ತದೆ. ಅಂಗಾಂಗ ಹೊಂದಾಣಿಕೆಗೆ ರಕ್ತದ ಗುಂಪು ಮತ್ತು ಇತರೆ ಮಾನದಂಡಗಳ ಆಧಾರದ ಮೇಲೆ, ಸ್ವೀಕೃತಿದಾರರನ್ನು ಆಯ್ಕೆ ಮಾಡಲಾಗುತ್ತದೆ, ಅವರನ್ನು ಆಸ್ಪತ್ರೆಗೆ ಕರೆತಂದು ಶಸ್ತ್ರಚಿಕಿತ್ಸೆಗೆ ಅಣಿಗೊಳಿಸಲಾಗುತ್ತದೆ. ಶಸ್ತ್ರಚಿಕಿತ್ಸಾ ವೈದ್ಯರ ತಂಡವು ದಾನಿಯಿಂದ ಪಡೆದ ಅಂಗಾಂಗ ಸಂರಕ್ಷಣೆಯನ್ನು ನಿರ್ವಹಿಸುತ್ತದೆ. ವೈದ್ಯಕೀಯ-ಕಾನೂನಾತ್ಮಕ ಪ್ರಕರಣಗಳಲ್ಲಿ, ಜೀವಸಾರ್ಥಕತೆಯು ಕುಟುಂಬಕ್ಕೆ ಅದರಲ್ಲಿರುವ ವಿಧಿವಿಧಾನಗಳಲ್ಲಿ ಸಹಾಯ ಮಾಡುತ್ತದೆ.