ಆಗಾಗ್ಗೆ ಕೇಳಲ್ಪಡುವ ಪ್ರಶ್ನೆಗಳು


ಯಾವ ಯಾವ ಅಂಗಾಂಗಗಳು ಮತ್ತು ಅಂಗಾಂಶಗಳನ್ನು ಬಳಸಬಹುದು?
ಇಪ್ಪತ್ತೈದಕ್ಕೂ ಹೆಚ್ಚಿನ ವಿವಿಧ ಅಂಗಾಂಗ ಅಂಗಾಂಶಗಳಾದ ಕಾರ್ನಿಯಾ, ಹೃದಯ ಕವಾಟಗಳು, ಯಕೃತ್ತು, ಮೂತ್ರಕೋಶ, ಮೂಳೆ ಮೃದ್ವಸ್ತಿ, ಅಸ್ತಿಮಜ್ಜೆ, ಚರ್ಮ, ಮೇದೋಜ್ಜೀರಕ ಗ್ರಂಥಿ, ಶ್ವಾಸಕೋಶ, ಕರುಳು ಮತ್ತು ಇನ್ನೂ ಮುಂತಾದವುಗಳು.

ಅಂಗಾಂಗಗಳು ಮತ್ತು ಅಂಗಾಂಶಗಳು ಯಾರಿಗೆ ಬೇಕಾಗುತ್ತವೆ?
ನಮ್ಮಲ್ಲಿ ಪ್ರತಿಯೊಬ್ಬರಲ್ಲು ಮುಖ್ಯವಾದ ಅಂಗಗಳಾದ ಮೆದುಳು, ಹೃದಯ, ಮೂತ್ರಕೋಶ, ಶ್ವಾಸಕೋಶ, ಯಕೃತ್ತು, ಇತ್ಯಾದಿಗಳಿವೆ. ಇವುಗಳಲ್ಲಿ ಯಾವುದೇ ವಿಫಲಾವಾದರೂ ಅದು ಸಾವನ್ನುಂಟುಮಾಡುತ್ತದೆ. ಮೆದುಳನ್ನು ಹೊರತುಪಡಿಸಿ ಎಲ್ಲಾ ಅಂಗಾಂಗಗಳನ್ನೂ ಬದಲಾಯಿಸಬಹುದಾಗಿದೆ- ಇವೆಲ್ಲವೂ ಜೀವ ರಕ್ಷಕಗಳಾಗಿವೆ. ಅಂಗಾಂಗಗಳಲ್ಲದೆ- ಅನೇಕ ಅಂಗಾಂಶಗಳಾದ ಕಾರ್ನಿಯಾ, ಹೃದಯ ಕವಾಟಗಳು, ಚರ್ಮ ಮತ್ತು ಎಲುಬುಗಳನ್ನೂ ಸಹ ದುರಸ್ತಿಗಾಗಿ ಬಳಸಬಹುದು ಮತ್ತು ಪುನಾರ್ರಚಿಸಬಹುದಾಗಿದೆ.

ಮೆದುಳು ಸಾವು ಎಂದರೇನು?
ಸಾಮಾನ್ಯವಾಗಿ ಹೃದಯವು ನಿಂತಾಗ ಸಾವು ಉಂಟಾಗುತ್ತದೆಂದು ಹೇಳಲಾಗುತ್ತದೆ. ಆದರೆ ಮೆದುಳು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ನಿಷ್ಕ್ರಿಯಗೊಂಡಿದ್ದರೂ ಸಹ ಆಧುನಿಕ ತಂತ್ರಜ್ಞಾನದಿಂದಾಗಿ ಹೃದಯ ಮತ್ತು ಶ್ವಾಸಕೋಶಗಳನ್ನು ಯಾಂತ್ರಿಕ ಸಹಾಯದಿಂದ ಕೆಲಸ ಮಾಡುವಂತೆ ಮಾಡಬಹುದಾಗಿದೆ. ಒಂದೊಮ್ಮೆ ಮೆದುಳಿನ ಸಾವು ಸಂಭವಿಸಿದರೆ; ವ್ಯಕ್ತಿಯು ಹೃದಯ ಬಡಿತವಿರುವ ಶವವಾಗುತ್ತಾನೆ.

‘ಮೆದುಳು ಸಾವಾಗಿರುವ’ ವ್ಯಕ್ತಿಯು ನಿಜಕ್ಕೂ ಸತ್ತಿದ್ದಾನೆಂದು ವೈದ್ಯರಿಗೆ ಹೇಗೆ ತಿಳಿಯುತ್ತದೆ?
ಸರ್ಕಾರದಿಂದ ಶಿಫಾರಸು ಮಾಡಲ್ಪಟ್ಟ ನಾಲ್ಕು ವೈದ್ಯರ ತಂಡವು ಅನೇಕ ಸರಣಿ ಪರೀಕ್ಷೆಗಳನ್ನು ನಡೆಸಿ ರೋಗಿ “ ಮೆದುಳು ಸಾವಾಗಿದ್ದಾರೆ” ಎಂದು ತೀರ್ಮಾನಿಸುತ್ತಾರೆ. ಮಾನದಂಡಗಳು ತುಂಬಾ ಕಠಿಣವಾಗಿದ್ದು ಅವುಗಳನ್ನು ವೈದ್ಯಕೀಯವಾಗಿ ಮತ್ತು ನೈತಿಕವಾಗಿ ವಿಶ್ವದಾದ್ಯಂತ ಸ್ವೀಕಾರಾರ್ಹವಾಗಿರುತ್ತವೆ. ನಾಲ್ಕು ವೈದ್ಯರು ಈ ಕೆಳಕಂಡ ವರ್ಗದವರಾಗಿರುತ್ತಾರೆ:
1. ರಾಜ್ಯದ ಸೂಕ್ತವೆನಿಸುವ ಅಧಿಕೃತವಾಗಿ ಅನುಮೋದಿಸಲ್ಪಟ್ಟ ನರ ಶಸ್ತ್ರಚಿಕಿತ್ಸೆ/ನರರೋಗ ತಜ್ಞರು
2. ಚಿಕಿತ್ಸೆ ನೀಡುತ್ತಿರುವ ವೈದ್ಯರು
3. ರಾಜ್ಯದ ಸೂಕ್ತ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ತುರ್ತು ನಿಗಾಘಟಕ/ ವೈದ್ಯರು
4. ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಕ ವೈದ್ಯರು.

ದಾನವು ದಾನಿಯ ಕುಟುಂಬದವರಿಗೆ ನೋವು ಅಥವ ಅಸೌಖ್ಯವನ್ನುಂಟು ಮಾಡುತ್ತದೆಯೇ?
ಅಂಗಾಂಗ ದಾನವು ತಕ್ಷಣದ ಮತ್ತು ಅಂತಿಮ ಸಮಾಧಾನವಾಗಿದೆ. ತಮ್ಮ ಪ್ರೀತಿ ಪಾತ್ರರು ಸತ್ತ ನಂತರವೂ ಕುಟುಂಬದವರಿಗೆ ಸಮಾಧಾನವೆನಿಸುತ್ತದೆ ಅವರ ಜೀವದಾನದಿಂದಾಗಿ ಒಬ್ಬರು ಅಥವಾ ಇನ್ನೂ ಹೆಚ್ಚಿನವರು ಬದುಕಬಹುದಾಗಿದೆ.

ಅಂಗಾಂಗ ದಾನ ಮಾಡಲು ವಯಸ್ಸಿನ ನಿರ್ಭಂಧವಿದೆಯೇ?
ಅಂಗಾಂಗ ದಾನ ಮಾಡಲು ಯಾರಾದರೂ ಬಯಸಿದರೆ ಅದು ವೈದ್ಯರ ತೀರ್ಮಾನವನ್ನವಲಂಬಿಸಿದೆ. ಸಾವಿನ ನಂತರ ಕಸಿ ಮಾಡಲಾಗುವ ಅಂಗಾಂಗಗಳು ಮತ್ತು ಅಂಗಾಂಶಗಳೆಂದರೆ ಕಾರ್ನಿಯಾಗಳು, ಹೃದಯ,ಯಕೃತ್ತು, ಮೂತ್ರಕೋಶಗಳು, ಮೂಳೆ ಮತ್ತು ಮೃದ್ವಸ್ತಿ, ಅಸ್ತಿಮಜ್ಜೆ, ಚರ್ಮ, ಮೇದೋಜ್ಜೀರಕ ಗ್ರಂಥಿ, ಶ್ವಾಸಕೋಶ, ಕರುಳು ಮತ್ತು ಇನ್ನೂ ಮುಂತಾದವುಗಳು. ಒಬ್ಬರು ಮೂತ್ರ ಕೋಶಗಳು ಮತ್ತು ಮೃದ್ವಸ್ತಿಗಳನ್ನು ಮಾತ್ರ ಬದುಕಿರುವ ದಾನಿಯಾಗಿ ದಾನ ಮಾಡಬಹುದು. ಮಹಾರಾಷ್ಟ್ರ ಸರ್ಕಾರದ ಮಾನದಂಡಗಳು ಮತ್ತು ಮಾರ್ಗದರ್ಶನಗಳಂತೆ ಅಂಗಾಂಗ ದಾನವನ್ನು 2 ವರ್ಷದಿಂದ ಹಿಡಿದು 65 ವರ್ಷ ವಯಸ್ಸಿನವರೆಗೆ ಮಾಡಬಹುದು.

ಯಾರು ಬೇಕಾದರೂ ದಾನಿಯಾಗಬಹುದೇ? ದಾನಿಯಾಗಲು ಬೇಕಾಗಿರುವ ಕನಿಷ್ಟ ಅಗತ್ಯಗಳೇನು?
ರಕ್ತದ ಗುಂಪು ಅಡ್ಡಿಪಡಿಸದಂತಿರಬೇಕು. ಪಡೆದುಕೊಳ್ಳುವವರ ರಕ್ತದ ಗುಂಪು ‘ಓ’- ಆಗಿದ್ದಲ್ಲಿ ದಾನಿಯೂ ಸಹ ‘ಓ’- ಆಗಿರಬೇಕು; ರಕ್ತದ ಗುಂಪು ಎಬಿ- ಆಗಿದ್ದಲ್ಲಿ ಓ,ಎ,ಬಿ&ಎಬಿಗೆ ದಾನಿಯಾಗಬಹುದು. ಇದು ಜೀವಂತ ಮೂತ್ರಕೋಶದ ದಾನಕ್ಕೆ. ಆರ್ ಹೆಚ್ ಗುಂಪು( ಧನಾತ್ಮಕ ಅಥವಾ ಋಣಾತ್ಮಕವಾಗಿರುವುದನ್ನು ಪರಿಗಣಿಸಲಾಗುವುದಿಲ್ಲ). ಶವದ ಅಂಗಾಂಗ ದಾನದಲ್ಲಿ ರಕ್ತದ ಗುಂಪಿನ ಹೊಂದಾಣಿಕೆಯನ್ನು ಕಠಿಣವಾಗಿ ಪರಿಗಣಿಸುವುದಿಲ್ಲ. ಇದೊಂದು ನೈತಿಕ ವಿಷಯವಾಗಿರುತ್ತದೆ ಮತ್ತು ‘ಓ’ ಗ್ರೂಪ್ ನವರು ಸಾರ್ವತ್ರಿಕ ದಾನಿಗಳಾಗಿದ್ದು ಯಾವಾಗಲೂ ಎಲ್ಲಾ ರೀತಿಯ ರಕ್ತದ ಗುಂಪಿನ ಪಡೆದುಕೊಳ್ಳುವವರಿಗೆ ದಾನ ಮಾಡಬಹುದು ಮತ್ತು ‘ಓ’ ಗುಂಪಿನ ಪಡೆದುಕೊಳ್ಳುವವರು ಯಾವಾಗಲೂ ಕಾಯುತ್ತಿರುತ್ತಾರೆ.